ಜೆಡಿಎಸ್‌ಗೆ ಇನ್ನೂ ಸ್ವಂತ ಬಲವಿದೆ. ಆದರೆ ಜಾತ್ಯತೀತ ಶಕ್ತಿಗಳು ಒಗ್ಗೂಡಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್ ಜತೆ ಮೈತ್ರಿಗೆ ಮುಂದಾಗುತ್ತಿದೆ ಎಂದು ಕೆಎಂಎಫ್ ರಾಜ್ಯಾಧ್ಯಕ್ಷ ಎಚ್.ಡಿ.ರೇವಣ್ಣ ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ಸತ್ತ ಪಕ್ಷ ಎನ್ನುವ ಪ್ರತಿಪಕ್ಷದವರ ಟೀಕೆಗಳಿಗೆ ಹುರುಳಿಲ್ಲ. ಪಕ್ಷ ವೀಕ್ ಆಗಿದ್ದರೆ ವಿಧಾನಸಭೆ ಸಭಾಪತಿ ಆಯ್ಕೆ ವೇಳೆ ಬಿಜೆಪಿ ಸಚಿವರು ದೇವೇಗೌಡರ ಮನೆ ಬಾಗಿಲವರೆಗೆ ಬರುತ್ತಿರಲಿಲ್ಲ. ಪಕ್ಷ ಯಾವತ್ತಿಗೂ ಸತ್ವ ಕಳೆದುಕೊಳ್ಳುವುದಿಲ್ಲ, ನಮ್ಮ ಪಕ್ಷ ಇನ್ನೂ ಬಲಾಢ್ಯವಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೇಲೆ ಸರಕಾರ ಹೂಡಿರುವ ಮಾನನಷ್ಟ ಮೊಕದ್ದಮೆಗೆ ನಾವು ಹೆದರುವುದಿಲ್ಲ. ದೇವೇಗೌಡರ ಕುಟುಂಬ ಈ ಹಿಂದೆಯೂ ಸಿಓಡಿ, ಸಿಬಿಐ ತನಿಖೆಗಳನ್ನು ನೋಡಿದೆ. ಕೆಎಂಎಫ್ ಡೈರಿ ತನಿಖೆ ನಡೀತು. ಹಾಗೆ ನೂರಾರು ತನಿಖೆ ನಡೆದಿದೆ. ಯಡಿಯೂರಪ್ಪನವರ ತನಿಖಾ ಪ್ರಹಾರಗಳಿಗೆ ದೇವೇಗೌಡರ ಕುಟುಂಬ ಬಗ್ಗುವುದಿಲ್ಲ ಎಂದರು.
ಸೈಕಲ್ ಖರೀದಿಯಲ್ಲಿ ಅವ್ಯವಹಾರ ಆಗಿದೆ ಎಂದು ದಿನೇಶ್ ಗುಂಡೂರಾವ್ ತನಿಖೆಗೆ ಒತ್ತಾಯಿಸಿದ್ದರು. ಆ ಫೈಲ್ ಏನಾಯಿತು ಎಂದು ಮುಖ್ಯಮಂತ್ರಿಯವರಿಗಷ್ಟೇ ಗೊತ್ತು ಎಂದರು. |