ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೇಕಾಬಿಟ್ಟಿ ಹೇಳಿಕೆ ನೀಡಬೇಡಿ: ಸುದರ್ಶನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೇಕಾಬಿಟ್ಟಿ ಹೇಳಿಕೆ ನೀಡಬೇಡಿ: ಸುದರ್ಶನ್
ಪಕ್ಷದ ಹಿತದೃಷ್ಟಿಯಿಂದ ಸಿದ್ಧರಾಮಯ್ಯನವರ ವಿಚಾರದಲ್ಲಿ ಅವಸರದ ಹೇಳಿಕೆ ನೀಡಬೇಡಿ ಎಂದು ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಬೆಂಬಲಿಗರಿಗೆ ತಾಕೀತು ಮಾಡಿದೆ.

ಸಿದ್ಧರಾಮಯ್ಯ ಕಾಂಗ್ರೆಸ್‌‌ನಲ್ಲಿಯೇ ಇರುತ್ತಾರೆ, ಪಕ್ಷಕ್ಕಾಗಿ ದುಡಿಯುತ್ತಾರೆ. ಬೆಂಬಲಿಗರು ಅವರ ಮುಂದಿನ ರಾಜಕೀಯ ನಡೆ ಕುರಿತು ಹೇಳಿಕೆ ನೀಡುವಾಗ ಎಚ್ಚರ ವಹಿಸಬೇಕು ಎಂದು ಕೆಪಿಸಿಸಿ ವಕ್ತಾರ ವಿ.ಆರ್.ಸುದರ್ಶನ್ ಹೇಳಿದ್ದಾರೆ.

ಸಿದ್ಧರಾಮಯ್ಯ ಒಳ್ಳೆಯ ನಾಯಕರು. ತಾವು ನೀಡುವ ಹೇಳಿಕೆಯಿಂದ ಅವರ ನಾಯಕತ್ವ, ವ್ಯಕ್ತಿತ್ವಗಳಿಗೆ ಧಕ್ಕೆಯಾಗುತ್ತದೆ ಎಂಬುದನ್ನು ಬೆಂಬಲಿಗರು ಅರ್ಥ ಮಾಡಿಕೊಳ್ಳಬೇಕು. ಸಿದ್ದರಾಮಯ್ಯ ಹಾಗೂ ಪಕ್ಷದ ವರ್ಚಸ್ಸಿಗೆ ಕುಂದು ಬರುವ ರೀತಿಯಲ್ಲಿ ಹೇಳಿಕೆ ನೀಡಬಾರದು ಎಂದರು.

ಇದೇ ಸಂದರ್ಭದಲ್ಲಿ ಸುದರ್ಶನ್, ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿಧಾನ ಮಂಡಲ ಅಧಿವೇಶನ ಕರೆಯಬೇಕು ಎಂದು ಒತ್ತಾಯಿಸಿದರು. ರಾಜ್ಯದ 84 ತಾಲೂಕುಗಳು ಬರದಿಂದ ತತ್ತರಿಸಿವೆ. ಪ್ರವಾಹ ಸಂತ್ರಸ್ತರ ಸಮಸ್ಯೆ ಬಗೆಹರಿದಿಲ್ಲ. ಬೆಂಗಳೂರಿನಲ್ಲಿ ಪಾಲಿಕೆ ಚುನಾವಣೆ ನಡೆಯದೇ ಅಭಿವೃದ್ದಿ ಕುಂಠಿತವಾಗಿದೆ.

ವಿವಾದಿತ ಆಸ್ತಿ ಮೇಲೆ ಸಾಲ ಪಡೆದು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿಲ್ಲ ಎಂದು ಸಚಿವ ಆನಂದ್ ಆಸ್ನೋಟಿಕರ್ ಒಪ್ಪಿಕೊಂಡಿದ್ದಾರೆ. ಆದರೂ ಮುಖ್ಯಮಂತ್ರಿ ಅವರನ್ನು ಸಂಪುಟದಿಂದ ಕೈ ಬಿಟ್ಟಿಲ್ಲ, ಇದು ಸರಿಯಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಶೋಕ್‌‌ರನ್ನು ಹುಚ್ಚಾಸ್ಪತ್ರೆಗೆ ಸೇರಿಸಿ:ದೇಶಪಾಂಡೆ
ಜೆಡಿಎಸ್ ದುರ್ಬಲ ಆಗಿಲ್ಲ: ರೇವಣ್ಣ
ಮಾನನಷ್ಟ ಮೊಕದ್ದಮೆ ಸ್ವಾಗತಿಸುತ್ತೇನೆ: ಕುಮಾರಸ್ವಾಮಿ
ಹೊಗೇನಕಲ್: ಕೇಂದ್ರದ ಮಧ್ಯಸ್ಥಿಕೆಗೆ ಸಿಎಂ ಸ್ವಾಗತ
ಬಳ್ಳಾರಿ ಆಡಳಿತ ರೆಡ್ಡಿಗಳಿಗೆ ಹೊರಗುತ್ತಿಗೆ: ಆರ್‌ವಿ
ಸೋನಿ ಆತ್ಮಹತ್ಯೆ: ಆರೋಪಿಗಳ ಜಾಮೀನು ಅರ್ಜಿ ವಜಾ