ಇಲ್ಲಿನ ಗೊಮ್ಮಟಗಿರಿಯಲ್ಲಿರುವ 13ನೇ ಶತಮಾನದ ಗೊಮ್ಮಟೇಶ್ವರ ವಿಗ್ರಹಕ್ಕೆ ಭಾನುವಾರ 59ನೇ ಮಸ್ತಕಾಭಿಷೇಕ ನಡೆಯಿತು. ಗೊಮ್ಮಟೇಶ್ವರ ವಿಗ್ರಹ ವಿವಿಧ ರಂಗುಗಳಲ್ಲಿ ಕಂಗೊಳಿಸಿತು.
ನಗರದಿಂದ 15 ಕಿ.ಮೀ. ದೂರದಲ್ಲಿರುವ ಬೆಟ್ಟದಲ್ಲಿ ಮಸ್ತಕಾಭಿಷೇಕ ಉತ್ಸವ ನಡೆಯಿತು. ಈ ವಾರ್ಷಿಕ ಮಸ್ತಕಾಭಿಷೇಕದಲ್ಲಿ ನೂರಾರು ಜೈನ ಭಕ್ತರು ಜೈಕಾರ ಹಾಕಿ ವಿರಾಗಿಗೆ ನಮನ ಅರ್ಪಿಸಿದರು.
ಶಿವಮೊಗ್ಗದ ಹೊಂಬುಜಾ ಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಮಂತ್ರೋಕ್ತ ಪೂಜಾ ಕೈಂಕರ್ಯಗಳು ನಡೆದವು. ನಂತರ ಸಂಪ್ರದಾಯದಂತೆ ಗೊಮ್ಮಟೇಶ್ವರನಿಗೆ ಅರಿಶಿಣ, ಗಂಧ, ಕುಂಕುಮ, ಎಳೆನೀರು, ಹಾಲು ಮತ್ತು ಕಬ್ಬಿನ ಹಾಲಿನ ಅಭಿಷೇಕ ಮಾಡಲಾಯಿತು.
ಶ್ರವಣಬೆಳಗೊಳದಲ್ಲಿ 12 ವರ್ಷಗಳಿಗೊವ್ಮೆ ಮಹಾ ಮಸ್ತಕಾಭಿಷೇಕ ನಡೆದ ಮಾದರಿಯಲ್ಲಿಯೇ ಇಲ್ಲಿ ಪ್ರತಿ ವರ್ಷ ಮಸ್ತಕಾಭಿಷೇಕ ನಡೆಯುತ್ತದೆ. |