ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸ್ಪೀಡ್ ಗವರ್ನರ್‌‌ಗೆ ಬ್ರೇಕ್: ಅಶೋಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಪೀಡ್ ಗವರ್ನರ್‌‌ಗೆ ಬ್ರೇಕ್: ಅಶೋಕ್
ತೀವ್ರ ವಿವಾದಕ್ಕೆ ಒಳಗಾಗಿದ್ದ ಸ್ಪೀಡ್ ಗವರ್ನರ್ ಆದೇಶವನ್ನು ಹಿಂತೆಗೆದುಕೊಳ್ಳುವ ಸಂಬಂಧ ಶೀಘ್ರವೇ ತೀರ್ಮಾನ ಕೈಗೊಳ್ಳುವುದಾಗಿ ಸಾರಿಗೆ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಸ್ಪೀಡ್ ಗವರ್ನರ್ ಅಳವಡಿಕೆಗೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ಒಂದು ತಿಂಗಳ ಗಡುವು ವಿಧಿಸಿತ್ತು. ಏತನ್ಮಧ್ಯೆ ಲಾರಿ ಮಾಲೀಕರು ಮತ್ತೆ ಮುಷ್ಕರವನ್ನು ನಡೆಸುವ ಬೆದರಿಕೆ ಹಾಕಿದ್ದರು.

ಆದರೆ ಸಚಿವ ಅಶೋಕ್ ಅವರು ಲಾರಿ ಮಾಲೀಕರೊಂದಿಗೆ ಮಾತುಕತೆ ನಡೆಸಿ, ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದರು.

ಆ ನಿಟ್ಟಿನಲ್ಲಿ ಸ್ಪೀಡ್ ಗವರ್ನರ್ ಆದೇಶ ಹಿಂತೆಗೆದುಕೊಳ್ಳುವ ನಿಟ್ಟಿನಲ್ಲಿ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದು, ಸಚಿವ ಸಂಪುಟದ ಗ್ರೀನ್ ಸಿಗ್ನಲ್ ದೊರೆಯುವುದೊಂದೇ ಬಾಕಿ ಎಂದು ಅಶೋಕ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶಿರಾಡಿಘಾಟ್:ಸಿಬಿಐ ತನಿಖೆಗೆ ಹೈ.ಕೋ.ಆದೇಶ
ಶೂಟೌಟ್ ಪ್ರಕರಣ:ಹೃಷಿಕೇಶ್ ಬಂಧನ
ಕೇಂದ್ರದಿಂದ ಸೇಡಿನ ರಾಜಕಾರಣ:ಯಡಿಯೂರಪ್ಪ
ಮೈಸೂರು ಗೊಮ್ಮಟನಿಗೆ ಮಸ್ತಕಾಭಿಷೇಕ
ದತ್ತ ಅಭಿಯಾನಕ್ಕೆ ಶಾಂತಿಯುತ ತೆರೆ
ಬೇಕಾಬಿಟ್ಟಿ ಹೇಳಿಕೆ ನೀಡಬೇಡಿ: ಸುದರ್ಶನ್