ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಂಸತ್ ಸ್ಥಾನಕ್ಕೆ ಮನೋರಮಾ ರಾಜೀನಾಮೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಸತ್ ಸ್ಥಾನಕ್ಕೆ ಮನೋರಮಾ ರಾಜೀನಾಮೆ
ಪಕ್ಷದ ವಿಪ್ ಉಲ್ಲಂಘಿಸಿ ಅಣು ಒಪ್ಪಂದ ಬೆಂಬಲಿಸಿದ ಉಡುಪಿ ಕ್ಷೇತ್ರದ ಸಂಸದೆ ಮನೋರಮಾ ಮಧ್ವರಾಜ್ ತಮ್ಮ ಲೋಕಸಭೆಯ ಸದಸ್ಯ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದಾರೆ. ಸ್ಪೀಕರ್ ಸೋಮನಾಥ ಚಟರ್ಜಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಅಣು ಒಪ್ಪಂದ ಪರ ನಿಲುವು ತಳೆಯುವ ಮೂಲಕ ಮನಮೋಹನ್ ಸಿಂಗ್ ನಾಯಕತ್ವದ ಯುಪಿಎ ಸರಕಾರವನ್ನು ಬೆಣಬಲಿಸಿದ ನಂತರ ಬಿಜೆಪಿಯಿಂದ ರೂರವಾಗಿದ್ದರು. ಅಣು ಒಪ್ಪಂದದಂಥ ಚಾರಿತ್ರಿಕ ವಿಷಯವನ್ನು ಬೆಂಬಲಿಸಿದ ಬಗ್ಗೆ ಅಪಾರ ಖುಷಿ ಇದೆ. ಇತರ ಯಾವುದೇ ಅಂಶಗಳಿಗಿಂತ ರಾಷ್ಟ್ರದ ಹಿತ ಮುಖ್ಯವಾದುದು ಎಂದು ಮನೋರಮಾ ಪ್ರತಿಕ್ರಿಯಿಸಿದ್ದಾರೆ.

ಖ್ಯಾತ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಕೂಡಾ ಒಪ್ಪಂದವನ್ನು ಬೆಂಬಲಿಸಿದ್ದಾರೆ. ಉಷ್ಣ ಸ್ಥಾವರಗಳ ಬಗ್ಗೆ ವಿರೋಧ ಹೊಂದಿರುವ ನಾನು ಅಣು ಶಕ್ತಿಯಿಂದ ಇಂಧನ ಉತ್ಪಾದನೆಗೆ ಸಹಾಯವಾಗಲಿದೆ ಎಂದು ನಂಬಿದ್ದೇನೆ ಎಂದಿದ್ದಾರೆ.

ಉಡುಪಿ ಕ್ಷೇತ್ರವನ್ನು ಐದು ಬಾರಿ ಪ್ರತಿನಿಧಿಸಿದ ಮನೋರಮಾ, ದೇವರಾಜ ಅರಸ್, ವೀರೇಂದ್ರ ಪಾಟೀಲ್, ಗುಂಡೂರಾವ್, ವೀರಪ್ಪ ಮೊಯ್ಲಿ ಸರಕಾರದಲ್ಲಿ ಸಚಿವರಾಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಸ್‌.ಎಸ್.ಪಾಟೀಲ್ ಬಿಜೆಪಿ ಸೇರ್ಪಡೆ
ಸ್ಪೀಡ್ ಗವರ್ನರ್‌‌ಗೆ ಬ್ರೇಕ್: ಅಶೋಕ್
ಶಿರಾಡಿಘಾಟ್:ಸಿಬಿಐ ತನಿಖೆಗೆ ಹೈ.ಕೋ.ಆದೇಶ
ಶೂಟೌಟ್ ಪ್ರಕರಣ:ಹೃಷಿಕೇಶ್ ಬಂಧನ
ಕೇಂದ್ರದಿಂದ ಸೇಡಿನ ರಾಜಕಾರಣ:ಯಡಿಯೂರಪ್ಪ
ಮೈಸೂರು ಗೊಮ್ಮಟನಿಗೆ ಮಸ್ತಕಾಭಿಷೇಕ