ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹೂವಿನಹಡಗಲಿ ಬಂದ್ ಯಶಸ್ವಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೂವಿನಹಡಗಲಿ ಬಂದ್ ಯಶಸ್ವಿ
ಇಲ್ಲಿನ ಎಂಜಿನಿಯರಿಂಗ್ ಕಾಲೇಜು ಸ್ಥಳಾಂತಗೊಳಿಸುವುದನ್ನು ವಿರೋಧಿಸಿ ಪ್ರಗತಿಪರ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಹಡಗಲಿ ಬಂದ್ ಸಂಪೂರ್ಣ ಯಶಸ್ವಿಯಾಯಿತು. ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಟ್ಟಣದಲ್ಲಿ ಕಪ್ಪು ಬಟ್ಟೆ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ಬಳಿಕ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಜನಾರ್ದನ ರೆಡ್ಡಿ ಮತ್ತು ಹಡಗಲಿ ಶಾಸಕ ಚಂದ್ರನಾಯ್ಕ ಅವರ ಅಣಕು ಶವಯಾತ್ರೆ ನಡೆಸಿ ಬಳಿಕ ಲಾಲ್ ಬಹದ್ದೂರು ಶಾಸ್ತ್ರಿ ವೃತ್ತದಲ್ಲಿ ದಹಿಸಲಾಯಿತು.

ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್, ಮಾಜಿ ಸಚಿವ ಈ.ಟಿ.ಶಂಭುನಾಥ ಮಾಜಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಭಾಗವಹಿಸಿದ್ದರು. ತಾಲೂಕಿನಾದ್ಯಂತ ಅನೇಕ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, ನಾಗರಿಕರು ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.

ಪಟ್ಟಣದ ಎಲ್ಲ ಅಂಗಡಿ ಮುಗ್ಗಟ್ಟುಗಳು, ಶಾಲಾ ಕಾಲೇಜುಗಳು ಮುಚ್ಚಿದ್ದವು. ರಸ್ತೆಗಳು ಜನರಿಲ್ಲದೇ ಬಿಕೋ ಎನ್ನುತ್ತಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಂಸತ್ ಸ್ಥಾನಕ್ಕೆ ಮನೋರಮಾ ರಾಜೀನಾಮೆ
ಎಸ್‌.ಎಸ್.ಪಾಟೀಲ್ ಬಿಜೆಪಿ ಸೇರ್ಪಡೆ
ಸ್ಪೀಡ್ ಗವರ್ನರ್‌‌ಗೆ ಬ್ರೇಕ್: ಅಶೋಕ್
ಶಿರಾಡಿಘಾಟ್:ಸಿಬಿಐ ತನಿಖೆಗೆ ಹೈ.ಕೋ.ಆದೇಶ
ಶೂಟೌಟ್ ಪ್ರಕರಣ:ಹೃಷಿಕೇಶ್ ಬಂಧನ
ಕೇಂದ್ರದಿಂದ ಸೇಡಿನ ರಾಜಕಾರಣ:ಯಡಿಯೂರಪ್ಪ