ಶಾಸಕರ ರಾಜೀನಾಮೆಯಿಂದ ತೆರವಾಗಿರುವ 8 ವಿಧಾನ ಸಭೆ ಕ್ಷೇತ್ರಗಳ ಮರುಚುನಾವಣೆ ಘೋಷಣೆ ವಿಳಂಬಕ್ಕೆ ಮುಖ್ಯ ಚುನಾವಣಾ ಆಯುಕ್ತ ಎನ್.ಗೋಪಾಲಸ್ವಾಮಿ ಕಾರಣರಾಗಿದ್ದು, ಅವರು ಬಿಜೆಪಿಯೊಂದಿಗೆ ಶಾಮೀಲಾಗಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ರಾಜ್ಯ ಮತದಾರರ ಯಾದಿಯಲ್ಲಿ 50 ಲಕ್ಷ ಬೋಗಸ್ ಮತದಾರರಿದ್ದಾರೆ. ಇದನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗಿತ್ತು. ಆದರೆ ಬಿಜೆಪಿ ಜೊತೆ ಕೈಜೋಡಿಸಿದ ಆಯೋಗ ತಮ್ಮ ಮನವಿಯನ್ನು ನಿರ್ಲಕ್ಷಿಸಿತು ಎಂದು ದೂರಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಹಣದ ಆಸೆಗಾಗಿ ಬಿಜೆಪಿ ಸೇರಿರುವ ಶಾಸಕರಿಗೆ ಬರುವ ಚುನಾವಣೆಯಲ್ಲಿ ತಕ್ಕ ಪಾಠ ಮತದಾರರಿಂದ ಸಿಗಲಿದೆ ಎಂದು ಅವರು ಹೇಳಿದರು.
ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಮಾಡದ ರಾಜ್ಯ ಸರ್ಕಾರ 2,700 ಕೋಟಿ ರೂ.ಗಳ ವಿದ್ಯುತ್ ಬಾಕಿ ಬಿಲ್ ವಸೂಲಿ ಮಾಡುತ್ತಿದೆ. ಐದೂವರೆ ಸಾವಿರ ಪೊಲೀಸರ ವರ್ಗ ಮಾಡಲು ಕೋಟ್ಯಂತರ ರೂ.ಗಳ ಲಂಚ ಪಡೆದಿದೆ ಎಂದು ಅವರು ಆಪಾದಿಸಿದರು.
ಪ್ರಜಾಪ್ರಭುತ್ವದ ವ್ಯವಸ್ಥೆ ಜನಪ್ರತಿನಿಧಿಗಳ ಮೇಲೆ ನಿಂತಿದೆ. ಕೇಂದ್ರದಿಂದ ನೇರವಾಗಿ ಗ್ರಾ..ಪಂ.ಗಳಿಗೆ ಹಣ ಬಿಡುಗಡೆಗೆ ಕಾಂಗ್ರೆಸ್ ಬೇಲೂರಿನಲ್ಲಿ ಐತಿಹಾಸಿಕ ನಿರ್ಣಯ ಸ್ವೀಕರಿಸಿತು. |