ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅಸ್ನೋಟಿಕರ್ ವಿರುದ್ಧ ತನಿಖೆ: ಲೋಕಾಯುಕ್ತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಸ್ನೋಟಿಕರ್ ವಿರುದ್ಧ ತನಿಖೆ: ಲೋಕಾಯುಕ್ತ
ಆಸ್ತಿ ವಿವರದ ಕುರಿತು ತಪ್ಪು ಮಾಹಿತಿ ನೀಡಿರುವ ಮೀನುಗಾರಿಕೆ ಸಚಿವ ಆನಂದ್ ಅಸ್ನೋಟಿಕರ್ ವಿರುದ್ಧ ಯಾರಾದರೂ ದೂರು ನೀಡಿದರೆ ತನಿಖೆ ನಡೆಸಲು ಸಿದ್ಧವೆಂದು ಲೋಕಾಯುಕ್ತ ನ್ಯಾ.ಎನ್.ಸಂತೋಷ್ ಹೆಗ್ಡೆ ಹೇಳಿದ್ದಾರೆ.

ಆನಂದ್ ಅಸ್ನೋಟಿಕರ್ ಚುನಾವಣೆ ಸಮಯದಲ್ಲಿ ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ವಿವರ ತಪ್ಪಿದೆಯೇ ಎಂಬುದು ತನಿಖೆ ನಡೆಸಿದ ಮೇಲಷ್ಟೇ ಗೊತ್ತಾಗಬೇಕಿದೆ ಎಂದು ಅವರು ಸ್ಪಷ್ಟಪಡಿಸಿದರು. ಸ್ವಯಂ ಪ್ರೇರಣೆಯಿಂದ ಯಾವುದೇ ತನಿಖೆ ನಡೆಸುವ ಅಧಿಕಾರ ಲೋಕಾಯುಕ್ತಕ್ಕೆ ಇಲ್ಲ ಎಂದು ತಿಳಿಸಿದರು.

ಇದುವರೆಗೆ ಯಾರೊಬ್ಬರು ಅಸ್ನೋಟಿಕರ್ ಆಸ್ತಿ ವಿವರಕಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದ ಮುಂದೆ ದೂರು ಸಲ್ಲಿಸಲಿಲ್ಲ.

ಆದ್ದರಿಂದ ತನಿಖೆ ನಡೆಸಲಾಗುತ್ತಿದೆ ಎಂಬ ವಿಷಯ ಸತ್ಯಕ್ಕೆ ದೂರವಾದುದು ಎಂದರು. ದೂರು ಇಲ್ಲದೇ ಯಾವುದೇ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಕೈಗೆತ್ತಿಕೊಳ್ಳುವುದಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶಂಕಿತ ನಕ್ಸಲೀಯರ ಬಂಧನ ?
ನವೆಂಬರ್‌ನಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ
ಬಿಜೆಪಿಯೊಂದಿಗೆ ಚುನಾವಣಾ ಆಯೋಗ ಶಾಮೀಲು:ಡಿಕೆಶಿ
ಹೂವಿನಹಡಗಲಿ ಬಂದ್ ಯಶಸ್ವಿ
ಸಂಸತ್ ಸ್ಥಾನಕ್ಕೆ ಮನೋರಮಾ ರಾಜೀನಾಮೆ
ಎಸ್‌.ಎಸ್.ಪಾಟೀಲ್ ಬಿಜೆಪಿ ಸೇರ್ಪಡೆ