ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವಿಪ್ರೋ ಅಧಿಕಾರಿ ಅಪಹರಣ ಪ್ರಕರಣ ಸುಖಾಂತ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಪ್ರೋ ಅಧಿಕಾರಿ ಅಪಹರಣ ಪ್ರಕರಣ ಸುಖಾಂತ್ಯ
ಮೂರು ಕೋಟಿ ರೂ.ಹಣಕ್ಕಾಗಿ ವಿಪ್ರೋ ಕಂಪೆನಿಯ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರೊಬ್ಬರನ್ನು ಅಪಹರಿಸಿದ್ದ ಮೂವರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿ,ಇಂಜಿನಿಯರನ್ನು ಬಿಡುಗಡೆಗೊಳಿಸಿರುವ ಘಟನೆ ಮಂಗಳವಾರ ನಗರದಲ್ಲಿ ನಡೆದಿದೆ.

ಬನ್ನೇರುಘಟ್ಟ ರಸ್ತೆಯಲ್ಲಿರುವ ವಿಪ್ರೋ ಸಂಸ್ಥೆಯ ಸಾಫ್ಟ್‌ವೇರ್ ಇಂಜಿನಿಯರ್ ವಿಜಯಲಕ್ಷ್ಮಿ ಅವರನ್ನು ಸೋಮವಾರ ರಾತ್ರಿ ಅಪಹರಣ ಮಾಡಿದ ಆರೋಪಿಗಳು ಆಕೆಯನ್ನು ಹೊಸೂರು ರಸ್ತೆ ಬೊಮ್ಮನಹಳ್ಳಿಯಲ್ಲಿರುವ ಮನೆಯೊಂದರಲ್ಲಿ ಅಡಗಿಸಿಟ್ಟು 3ಕೋಟಿ ರೂ.ಕೊಟ್ಟರೆ ಮಾತ್ರ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ವಿಜಯಲಕ್ಷ್ಮಿ ಅವರನ್ನು ಮನೆಯಿಂದ ಕಚೇರಿಗೆ, ಕಚೇರಿಯಿಂದ ಮನೆಗೆ ಪ್ರತಿದಿನ ಕರೆದುಕೊಂಡು ಹೋಗಿ ಬರುವ ವ್ಯಕ್ತಿ ಕ್ಯಾಬ್ ಚಾಲಕ ಸೇರಿದಂತೆ ಒಟ್ಟು ಮೂರು ಮಂದಿ ಸಂಚು ಮಾಡಿ ವಿಜಯಲಕ್ಷ್ಮಿಯನ್ನು ಅಪಹರಣ ಮಾಡಿದ್ದರು.

ಮಂಗಳವಾರ ಬೆಳಿಗ್ಗೆ 7ಗಂಟೆಗೆ ವಿಜಯಲಕ್ಷ್ಮಿ ಅವರನ್ನು ಅಡಗಿಸಿಟ್ಟ ಏಕಾಂತ ಸ್ಥಳವನ್ನು ಶೋಧಿಸಿ,ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ವಿಜಯಲಕ್ಷ್ಮಿ ಅವರನ್ನು ಪೋಷಕರಿಗೆ ಒಪ್ಪಿಸುವ ಮೂಲಕ ಪ್ರಕರಣವನ್ನು ಸುಖಾಂತ್ಯಗೊಳಿಸಿದರು.

ಮೂರು ಮಂದಿ ಅಪಹರಣಕಾರರನ್ನು ತಿಲಕ್ ನಗರ ಠಾಣೆಯ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಯೋತ್ಪಾದನಾ ನಿಗ್ರಹ ಘಟಕ ಸ್ಥಾಪನೆ: ಸಿಎಂ
ಹೆಗ್ಗಡೆ ಷಷ್ಟ್ಯಬ್ದಿ: ಗ್ರಾಮೀಣಾಭಿವೃದ್ಧಿ ಕಾರ್ಯಾಗಾರ
ರಾಜ್ಯಕಾರಣದಲ್ಲಿ ಮಹತ್ತರ ಬದಲಾವಣೆ:ವರ್ತೂರ್
ಅಸ್ನೋಟಿಕರ್ ವಿರುದ್ಧ ತನಿಖೆ: ಲೋಕಾಯುಕ್ತ
ಶಂಕಿತ ನಕ್ಸಲೀಯರ ಬಂಧನ ?
ನವೆಂಬರ್‌ನಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ