ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ತೆಲಗಿಗೆ ಜೈಲಿನಲ್ಲಿ ರಾಜಾತಿಥ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೆಲಗಿಗೆ ಜೈಲಿನಲ್ಲಿ ರಾಜಾತಿಥ್ಯ
NRB
ದೇಶವನ್ನೇ ತಲ್ಲಣಗೊಳಿಸಿದ್ದ ಬಹುಕೋಟಿ ನಕಲಿ ಛಾಪಾಕಾಗದ ಹಗರಣದ ಪ್ರಮುಖ ಆರೋಪಿ ಕರೀಂ ಲಾಲಾ ತೆಲಗಿಗೆ ಅಪರಾಧಿಯೆಂದು ಸಾಬೀತಾಗಿ ಶಿಕ್ಷೆಯಾಗಿರುವುದು ಜಗತ್ತಿಗೇ ತಿಳಿದಿರುವ ಸಂಗತಿ.

ಆದರೆ, ಕಾರಾಗೃಹದಲ್ಲಿ ಕಠಿಣ ಶಿಕ್ಷೆ ಅನುಭವಿಸಬೇಕಿದ್ದ ತೆಲಗಿ ಈಗ ರಾಜಾತಿಥ್ಯ ಪಡೆಯುತ್ತಿರುವ ಸಂಗತಿ ಗೊತ್ತಾಗಿದೆ. ತೆಲಗಿ ಈ ಹಿಂದೆ ಹೈಕೋರ್ಟ್ ಗೆ ಮನವಿ ಸಲ್ಲಿಸಿ ನನಗೆ ಸಕ್ಕರೆ ಖಾಯಿಲೆ ಇದೆ.. ಎಂದು ಖಾಯಿಲೆಗಳ ಪಟ್ಟಿಯನ್ನೇ ಸಲ್ಲಿಸಿದ್ದ. ಮತ್ತು ಇದರಿಂದಾಗಿ ಆರೋಗ್ಯ ಹಾಳಾಗಿದ್ದು, ಮನೆ ಊಟ ನೀಡುವಂತೆ ಕೋರಿಕೊಂಡಿದ್ದ.

ಇದಕ್ಕೆ ಸ್ಪಂದಿಸಿದ್ದ ಹೈಕೋರ್ಟ್ ಸೂಕ್ತ ಚಿಕಿತ್ಸಾ ಸೌಲಭ್ಯ ಕಲ್ಪಿಸುವಂತೆ ಸೂಚನೆ ನೀಡಿತ್ತು. ಆದರೆ ಈಗ ತೆಲಗಿ ರಾಜಾತಿಥ್ಯ ಪಡೆಯುತ್ತಿದ್ದು, ಮೀನು, ಮೊಟ್ಟೆ, ಮಾಂಸ ಗಳನ್ನು ಮೆಲ್ಲುವಲ್ಲಿ ಯಶಸ್ವಿಯಾಗಿದ್ದಾನೆಂದು ಗೊತ್ತಾಗಿದೆ.

ಅಪರಾಧ ಸಾಬೀತಾದ ಆರೋಪಿಗಳಿಗೆ ಇತರ ಕೈದಿಗಳಿಗಿಂತ ಭಿನ್ನ ಆಹಾರ ಕೊಡುವುದಕ್ಕೆ ಸಿಬಿಐ ಆಕ್ಷೇಪ ವ್ಯಕ್ತಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿಪ್ರೋ ಅಧಿಕಾರಿ ಅಪಹರಣ ಪ್ರಕರಣ ಸುಖಾಂತ್ಯ
ಉಗ್ರರ ನಿಗ್ರಹಕ್ಕೆ ಸುರಕ್ಷತಾ ಆಯೋಗ: ಸಿಎಂ
ಹೆಗ್ಗಡೆ ಷಷ್ಟ್ಯಬ್ದಿ: ಗ್ರಾಮೀಣಾಭಿವೃದ್ಧಿ ಕಾರ್ಯಾಗಾರ
ರಾಜ್ಯಕಾರಣದಲ್ಲಿ ಮಹತ್ತರ ಬದಲಾವಣೆ:ವರ್ತೂರ್
ಅಸ್ನೋಟಿಕರ್ ವಿರುದ್ಧ ತನಿಖೆ: ಲೋಕಾಯುಕ್ತ
ಶಂಕಿತ ನಕ್ಸಲೀಯರ ಬಂಧನ ?