ಉಡುಪಿಯಲ್ಲಿ ಕನಕಗೋಪುರವೇ ಇರಲಿಲ್ಲವೆಂದು ಹೇಳಿಕೆ ನೀಡುವ ಮೂಲಕ ಕುರುಬ ಸಮಾಜಕ್ಕೆ ಅಪಮಾನ ಮಾಡಿರುವ ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಮ್ಮ ಹೇಳಿಕೆಯನ್ನು ಹಿಂದೆ ಪಡೆಯದಿದ್ದರೆ ಹೋರಾಟ ನಡೆಸುವುದಾಗಿ ಯುವ ಜೆಡಿಎಸ್ ರಾಜ್ಯಾಧ್ಯಕ್ಷ ಅರವಿಂದ ದಳವಾಯಿ ಎಚ್ಚರಿಸಿದ್ದಾರೆ.
ಕನಕ ಗೋಪುರ ರಾಜಕಾರಣಿಗಳ ಸೃಷ್ಟಿ ಎಂಬಂತೆ ಸುಳ್ಳು ಆರೋಪ ಮಾಡುವ ಮೂಲಕ ಬಿಜೆಪಿಯ ಹಿಡನ್ ಅಜೆಂಡಾ ಜಾರಿಗೆ ತರಲು ಈಶ್ವರಪ್ಪ ಹೊರಟ್ಟಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಪೇಜಾವರ ಸ್ವಾಮೀಜಿ ಹಾಗೂ ಆರ್‌ಎಸ್‌ಎಸ್ ಮುಖಂಡರನ್ನು ಮೆಚ್ಚಿಸಲು ಈಗ ಬಾಲಿಶವಾದ ಹೇಳಿಕೆಯನ್ನು ಈಶ್ವರಪ್ಪ ನೀಡುತ್ತಿದ್ದಾರೆ. ಅವರು ಇಂತಹ ದುರ್ವರ್ತನೆಯನ್ನು ಕೂಡಲೇ ಕೈ ಬಿಡಬೇಕು. ಇಡೀ ಕುರುಬ ಸಮುದಾಯದ ವರ್ಚಸ್ಸಿಗೆ ಮಸಿ ಬಳಿಯುವ ರೀತಿ ಈಶ್ವರಪ್ಪ ವರ್ತಿಸುತ್ತಿರುವುದನ್ನು ನಿಲ್ಲಿಸಬೇಕು ಎಂದು ತಾಕೀತು ಮಾಡಿದರು.
ಐತಿಹಾಸಿಕ ಕನಕಗೋಪುರವನ್ನು ಕೆಲವು ಮಠಾಧಿಪತಿಗಳು ರಾಜಗೋಪುರವೆಂದು ಕರೆಯಲು ಹೊರಟಿರುವುದನ್ನು ನೋಡಿದರೆ, ಇದು ಖಂಡಿತ ಕ್ರಿಮಿನಲ್ ಅಪರಾಧವಾಗುತ್ತದೆ.
ಬಿಜೆಪಿಗೆ ಮತ್ತು ಮಠಾಧೀಶರಿಗೆ ಅನುಮಾನಗಳಿದ್ದರೆ ಕನಕನ ಬಗ್ಗೆ, ಗೋಪುರದ ಬಗ್ಗೆ ಅಥವಾ ಕನಕ ಉಡುಪಿಗೆ ಬಂದು ಶ್ರೀಕೃಷ್ಣನನ್ನು ಒಲಿಸಿಕೊಂಡ ಬಗ್ಗೆ ತಜ್ಞರಿಂದ ಅಭಿಪ್ರಾಯ ಪಡೆಯಲಿ ಎಂದರು. |