ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವಿಪ್ರೋ: ಅಪಹರಣದ ರೂವಾರಿ ಕಾರು ಚಾಲಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಪ್ರೋ: ಅಪಹರಣದ ರೂವಾರಿ ಕಾರು ಚಾಲಕ
ವಿಪ್ರೋ ಮಹಿಳಾ ಅಧಿಕಾರಿ ವಿಜಯಲಕ್ಷ್ಮಿ ಅವರ ಅಪಹರಣದ ರೂವಾರಿ ಅವರ ಕಾರು ಚಾಲಕ ಎಂಬುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬೊಮ್ಮನಹಳ್ಳಿ ಪ್ರದೇಶದ ನಿವಾಸಿಗಳಾದ ಲಕ್ಷ್ಮಿಪತಿ (25), ದಿಲೀಪ್(27), ಲಕ್ಷ್ಮಣ್ (29) ಮತ್ತು ಗಫಾರ್ (30) ಬಂಧಿತರಾಗಿದ್ದಾರೆ. ಇವರು ಮೂರು ಕೋಟಿ ರೂಪಾಯಿ ಪಡೆಯಲು ಅಪಹರಣದ ಯೋಜನೆ ರೂಪಿಸಿದ್ದರು.

ವಿಜಯಲಕ್ಷ್ಮಿ ಅವರ ಕಾರು ಚಾಲಕ ಲಕ್ಷ್ಮಿಪತಿ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಲು ಮತ್ತು ಪ್ರಕರಣದಲ್ಲಿ ಶಾಮೀಲಾಗಿರುವ ಇನ್ನಿಬ್ಬರನ್ನು ಬಂಧಿಸಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಪ್ರೋ ಕಂಪೆನಿಯಿಂದ ಕರ್ತವ್ಯ ಮುಗಿಸಿ ಸೋಮವಾರ ರಾತ್ರಿ 8.30ರ ಸಮಾರಿಗೆ ಮನೆಗೆ ಮರಳುತ್ತಿದ್ದ ವೇಳೆ ಅಗರ ಜಂಕ್ಷನ್ ಬಳಿ ಈ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ,ಅಪಹರಿಸಿದ್ದರು.

ಬಳಿಕ 11ಗಂಟೆಗೆ ವಿಜಯಲಕ್ಷ್ಮಿ ಅವರಿಂದ ಮನೆಗೆ ದೂರವಾಣಿ ಕರೆ ಮಾಡಿಸಿದ ಅಪಹರಣಕಾರರು,ಎರಡು ಜೊತೆ ಉಡುಪು ಮತ್ತು ಚೆಕ್ ಬುಕ್ ತರುವಂತೆ ಒತ್ತಡ ಹೇರಿದ್ದರು.
ಆದರೆ ಅವರ ತಂದೆ ಶಿವರಾಮಯ್ಯ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದರು.

ನಂತರ ವಿಜಯಲಕ್ಷ್ಮಿ ಅವರ ಮನೆಗೆ ತಿಲಕ್ ನಗರ ಪೊಲೀಸರು ಆಗಮಿಸಿ,ಅಪಹರಣದ ಮಾಹಿತಿ ಕಲೆ ಹಾಕುತ್ತಿರುವಾಗಲೇ, ಕಾರಿನಲ್ಲಿ ಮರಳಿದ ಲಕ್ಷ್ಮಿಪತಿ,ನಾಲ್ವರು ವಿಜಯಲಕ್ಷ್ಮಿ ಅವರನ್ನು ಅಪಹರಿಸಿದ್ದಾರೆ.

ನನ್ನ ಮೇಲೂ ಹಲ್ಲೆ ಮಾಡಿದ್ದಾರೆ, ಉಡುಪು ಮತ್ತು ಚೆಕ್ ಬುಕ್ ತರಲು ಕಳುಹಿಸಿದ್ದಾರೆ ಎಂದು ಹೇಳತೊಡಗಿದ. ಇದರಿಂದ ಅನುಮಾನಗೊಂಡ ಪೊಲೀಸರು ಆತನನ್ನೇ ತೀವ್ರ ವಿಚಾರಣೆಗೆ ಗುರಿಪಡಿಸಿದಾಗ ಪ್ರಕರಣ ಬಯಲುಗೊಂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕನಕಗೋಪುರ: ಈಶ್ವರಪ್ಪ ಹೇಳಿಕೆಗೆ ಖಂಡನೆ
ಮದುವೆ ಒಲ್ಲೆನೆಂದ ವಿದ್ಯಾರ್ಥಿನಿಗೆ ಆಸಿಡ್
ತೆಲಗಿಗೆ ಜೈಲಿನಲ್ಲಿ ರಾಜಾತಿಥ್ಯ
ವಿಪ್ರೋ ಅಧಿಕಾರಿ ಅಪಹರಣ ಪ್ರಕರಣ ಸುಖಾಂತ್ಯ
ಉಗ್ರರ ನಿಗ್ರಹಕ್ಕೆ ಸುರಕ್ಷತಾ ಆಯೋಗ: ಸಿಎಂ
ಹೆಗ್ಗಡೆ ಷಷ್ಟ್ಯಬ್ದಿ: ಗ್ರಾಮೀಣಾಭಿವೃದ್ಧಿ ಕಾರ್ಯಾಗಾರ