ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಚರ್ಚ್ ದಾಳಿ: ಮಹೇಂದ್ರ ವಿರುದ್ಧ ಗೂಂಡಾ ಕಾಯ್ದೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚರ್ಚ್ ದಾಳಿ: ಮಹೇಂದ್ರ ವಿರುದ್ಧ ಗೂಂಡಾ ಕಾಯ್ದೆ
ಬಜರಂಗದಳದ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ ವಿರುದ್ಧ ಬಿಜೆಪಿ ಸರ್ಕಾರ ವಿನಾಕಾರಣ ಗೂಂಡಾ ಕಾಯಿದೆ ದಾಖಲಿಸಿರುವುದನ್ನು ಖಂಡಿಸಿ ಬಜರಂಗದಳ ಕಾರ್ಯಕರ್ತರು ಇಲ್ಲಿನ ಸಬ್‌ಜೈಲು ಮತ್ತು ಬಿಜೆಪಿ ಕಚೇರಿ ಎದುರು ಧರಣಿ ನಡೆಸಿದರು.

ಚಿಕ್ಕಮಗಳೂರು ಪೊಲೀಸರು ಸಬ್‌‌ಜೈಲ್‌ಗೆ ಬಂದು ಮಹೇಂದ್ರ ಕುಮಾರ್ ವಿರುದ್ಧ ದಾಖಲಾದ ಪ್ರಕರಣಗಳ ವಿವರ ಪಡೆಯುತ್ತಿರುವ ವಿಚಾರ ತಿಳಿದ ತಕ್ಷಣ ಬಜರಂಗದಳ ಕಾರ್ಯಕರ್ತರು ಜೈಲು ಹೊರಗಡೆ ಜಮಾಯಿಸಿ ಪ್ರತಿಭಟನೆ ನಡೆಸಿದರು.

ಸತ್ಯದರ್ಶಿನಿ ಪುಸ್ತಕ ಪ್ರಕಟಿಸಿ ಹಿಂದೂಗಳ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸಿದವರನ್ನು ಬಂಧಿಸಿಲ್ಲ ಎಂದು ವಿಹಿಂಪ ವಕ್ತಾರ ಜಗದೀಶ ಶೇವಣ ದೂರಿದರು. ಸರ್ಕಾರ ಮಹೇಂದ್ರ ಕುಮಾರ್ ವಿರುದ್ಧ ಗೂಂಡಾ ಕಾಯಿದೆ ಹಾಕಿದಲ್ಲಿ ಬಜರಂಗದಳಕ್ಕೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ನಗರ ಸಂಚಾಲಕ ಶಿವಾನಂದ, ಜಿಲ್ಲಾ ಸಹ ಸಂಚಾಲಕ ಶರಣ್ ಪಂಪ್ವೆಲ್ ತಿಳಿಸಿದ್ದಾರೆ.

ಚಿಕ್ಕಮಗಳೂರು ಪೊಲೀಸರು ಗೂಂಡಾ ಕಾಯಿದೆ ಹಿನ್ನೆಲೆಯಲ್ಲಿ ಕರೆದೊಯ್ಯಲು ಬಂದಿಲ್ಲ. ಹೈಕೋರ್ಟ್‌‌ನಲ್ಲಿ ಜಾಮೀನು ಪ್ರಕರಣದ ಹಿನ್ನೆಲೆಯಲ್ಲಿ ಮಾಹಿತಿ ಪಡೆಯಲು ಬಂದಿದ್ದರು ಎಂದು ಕಾರಾಗೃಹ ಅಧೀಕ್ಷಕ ಸುದ್ದಿಗಾರರಿಗೆ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿಪ್ರೋ: ಅಪಹರಣದ ರೂವಾರಿ ಕಾರು ಚಾಲಕ
ಕನಕಗೋಪುರ: ಈಶ್ವರಪ್ಪ ಹೇಳಿಕೆಗೆ ಖಂಡನೆ
ಮದುವೆ ಒಲ್ಲೆನೆಂದ ವಿದ್ಯಾರ್ಥಿನಿಗೆ ಆಸಿಡ್
ತೆಲಗಿಗೆ ಜೈಲಿನಲ್ಲಿ ರಾಜಾತಿಥ್ಯ
ವಿಪ್ರೋ ಅಧಿಕಾರಿ ಅಪಹರಣ ಪ್ರಕರಣ ಸುಖಾಂತ್ಯ
ಉಗ್ರರ ನಿಗ್ರಹಕ್ಕೆ ಸುರಕ್ಷತಾ ಆಯೋಗ: ಸಿಎಂ