ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > 13 ಭ್ರಷ್ಟರು ಲೋಕಾಯುಕ್ತ ಬಲೆಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
13 ಭ್ರಷ್ಟರು ಲೋಕಾಯುಕ್ತ ಬಲೆಗೆ
ರಾಜ್ಯಾದ್ಯಂತ ಬುಧವಾರ ಲೋಕಾಯುಕ್ತ ನಡೆಸಿದ ದಾಳಿಯಲ್ಲಿ 13 ಮಂದಿ ಭ್ರಷ್ಟ ಅಧಿಕಾರಿಗಳು ಬಲೆಗೆ ಬಿದ್ದಿದ್ದು, ಕೋಟ್ಯಂತರ ರೂ. ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಬಾಗಲಕೋಟೆ, ಗುಲ್ಬರ್ಗ, ಬಿಜಾಪುರ ಜಿಲ್ಲೆಗಳಲ್ಲಿ ಬುಧವಾರ ಮುಂಜಾನೆ 6 ಗಂಟೆಗೆ ಲೋಕಾಯುಕ್ತ ತಂಡಗಳು ಕೈಗೊಂಡ ಕಾರ್ಯಾಚರಣೆಯಲ್ಲಿ ಈ ಭ್ರಷ್ಟ ಅಧಿಕಾರಿಗಳ ಬಣ್ಣ ಬಯಲು ಮಾಡಿದ್ದಾರೆ.

ಕನಕಪುರದ ವೃತ್ತ ನೀರೀಕ್ಷಕ ಕೋನಪ್ಪರೆಡ್ಡಿ, ಬೆಂಗಳೂರು ಪೊಲೀಸ್ ಮಹಾನಿರ್ದೇಶಕರ ಕಚೇರಿಯ ಡಿವೈಎಸ್ಪಿ ಸುರೇಂದ್ರ, ಸವದತ್ತಿ ವೃತ್ತ ನೀರೀಕ್ಷಕ ನಾರಾಯಣ ವಿ. ಬರಮನಿ, ಹೊಸಕೋಟೆ ಉಪನೋಂದಣಾಧಿಕಾರಿ ಲಕ್ಷ್ಮಣ ಪ್ರಸಾದ್, ಗುಲ್ಬರ್ಗಾ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಭಿಯಂತರ ಮಹದೇವಪ್ಪ .

ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಹೇಶ್ ಕೃಷ್ಣ, ಯಲಹಂಕ ಸಬ್ ಇನ್ಸ್ಪೆಕ್ಟರ್ ಓಬಳೇಶ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಥಣಿಸಂದ್ರದ ನಾಗರಾಜ್, ಬಿಜಾಪುರ ಪ್ರಾದೇಶಿಕ ಸಾರಿಗೆ ಕಚೇರಿಯ ಬ್ರೇಕ್ ಇನ್ಸ್ಪೆಕ್ಟರ್ ಶಿವಪ್ರಸಾದ್, ಬೆಂಗಳೂರು ಗ್ರಾಮಾಂತರದ ಹುಳಿಯಾಲ ಗ್ರಾಮ ಲೆಕ್ಕಿಗ ವಾಲಿಜಾನ್.

ಬೆಂಗಳೂರಿ ಉತ್ತರ ತಾಲೂಕಿನ ಉಪ ತಹಸೀಲ್ದಾರ್ ಕೃಷ್ಣ ನಾಯಕ್ ಅವರ ದೇವನಹಳ್ಳಿ ಮತ್ತು ಬನಶಂಕರಿ ನಿವಾಸ, ಬಸವೇಶ್ವರ ನಗರ ವರ್ಕ್ಇನ್ಸ್ಪೆಕ್ಟರ್(ಬಿಬಿಎಂಪಿ) ರಂಗಸ್ವಾಮಿ ರಾಜಾಜಿನಗರದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವ್ಯವಸ್ಥಾಪಕ ವೆಂಕಟರಮಣಸ್ವಾಮಿ ಅವರಿಗೆ ಸೇರಿದ ಕನಕಪುರ ರಸ್ತೆ ಕಾಶೀನಗರ ಬೃಹತ್ ಬಂಗಲೆ ಮೇಲೆ ಲೋಕಾಯುಕ್ತ ಸಿಬ್ಬಂದಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಭ್ರಷ್ಟರ ಆಸ್ತಿ ವಿವರ:

ರಾಜಾಜಿನಗರದ ಆಹಾರ ಮತ್ತು ನಗರಿಕ ಪೂರೈಕೆ ಇಲಾಖೆ ವ್ಯವಸ್ಥಾಪಕ ವೆಂಕಟರಮಣಸ್ವಾಮಿಗೆ ಕನಕಪುರ ರಸ್ತೆ ಮೆಟ್ರೋ ಸಮೀಪದ ಕಾಶೀನಗರದಲ್ಲಿ ದೊಡ್ಡದೊಂದು ಬಂಗಲೆ, ಜೆಪಿ ನಗರದಲ್ಲೊಂದು ಬೃಹತ್ ಬಂಗಲೆ ಸೇರಿದಂತೆ 4 ಕೋಟಿ ಬೆಲೆ ಬಾಳುವ ಆಸ್ತಿ ಪಾಸ್ತಿ.

ಬಿಜಾಪುರ ಸಾರಿಗೆ ಕಚೇರಿಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಶಿವಪ್ರಸಾದ್ ಆಸ್ತಿ ವಿವರ : ಹಿನಕಲ್‌ನಲ್ಲಿ ಭಾರೀ ಬಂಗಲೆ, ಬಿಜಾಪುರ, ಬೆಂಗಳೂರು ಹಾಗೂ ಮೈಸೂರಿನಲ್ಲಿನಲ್ಲಿರುವ ನಿವಾಸದಲ್ಲಿ ನಡೆದ ದಾಳಿಯ ವೇಳೆ ದೊರೆತ ಆಸ್ತಿ ಪತ್ರಗಳ ಅಂದಾಜು ಕಾರ್ಯ ಇನ್ನೂ ನಡೆಯುತ್ತಿದೆ. ವಿಜಯ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಬೃಹತ್ ಕಟ್ಟಡ. ಮತ್ತು ಸ್ಕಾರ್ಪಿಯೋ ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಬೆಂಗಳೂರು ಉತ್ತರ ತಾಲೂಕಿನ ಉಪತಹಸೀಲ್ದಾರ್ ಕೃಷ್ಣ ನಾಯಕ್‌‌ಗೆ ಬನಶಂಕರಿಯಲ್ಲಿ ಒಂದೇ ಕಡೆ ಮೂರು ಮನೆಗಳಿವೆ. ಇವು ಕೋಟಿ ರೂ.ಮೌಲ್ಯ ಹೊಂದಿವೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚರ್ಚ್ ದಾಳಿ: ಮಹೇಂದ್ರ ವಿರುದ್ಧ ಗೂಂಡಾ ಕಾಯ್ದೆ
ವಿಪ್ರೋ: ಅಪಹರಣದ ರೂವಾರಿ ಕಾರು ಚಾಲಕ
ಕನಕಗೋಪುರ: ಈಶ್ವರಪ್ಪ ಹೇಳಿಕೆಗೆ ಖಂಡನೆ
ಮದುವೆ ಒಲ್ಲೆನೆಂದ ವಿದ್ಯಾರ್ಥಿನಿಗೆ ಆಸಿಡ್
ತೆಲಗಿಗೆ ಜೈಲಿನಲ್ಲಿ ರಾಜಾತಿಥ್ಯ
ವಿಪ್ರೋ ಅಧಿಕಾರಿ ಅಪಹರಣ ಪ್ರಕರಣ ಸುಖಾಂತ್ಯ