ಆನೇಕಲ್ ಸಮೀಪದ ಯಡವನಹಳ್ಳಿ ಚರ್ಚ್ ದಾಳಿ ಸೇರಿದಂತೆ ಮೂರು ಪ್ರಕರಣಗಳನ್ನು ರಾಜ್ಯ ಸರ್ಕಾರ ಸಿಓಡಿ ತನಿಖೆಗೆ ಒಪ್ಪಿಸಿದೆ. ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಚರ್ಚ್‌ನಲ್ಲಿ ಹಾನಿ ಸಂಭವಿಸಿದೆ ಎಂದು ಆರಂಭದಲ್ಲಿ ಹೇಳಲಾಗಿತ್ತು.
ಆದರೆ ಚರ್ಚ್‌ನ ಫಾದರ್ ದುಷ್ಕರ್ಮಿಗಳು ಈ ಕೃತ್ಯವೆಂದು ಶಂಕಿಸಿರುವುದರಿಂದ ಗೊಂದಲಕ್ಕೆ ಅವಕಾಶ ನೀಡಬಾರದು ಎಂದು ಸಿಓಡಿಗೆ ಒಪ್ಪಿಸಲಾಗಿದೆ ಎಂದು ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ ತಿಳಿಸಿದ್ದಾರೆ.
ಚರ್ಚ್‌ಗಳ ಮೇಲಿನ ದಾಳಿ ಪ್ರಕರಣಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿ ನ್ಯಾಯಾಧೀಶರ ನೇಮಕ ಮಾಡಲಾಗಿದೆ. ಯಡವನಹಳ್ಳಿ ಚರ್ಚ್ ಪ್ರಕರಣವನ್ನೂ ನ್ಯಾಯಾಂಗ ತನಿಖೆಗೆ ಒಪ್ಪಿಸಲಾಗಿದೆ. ಆದರೂ ಅನುಮಾನಗಳಿಗೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಸಿಓಡಿ ತನಿಖೆಗೆ ಆದೇಶಿಸಲಾಗಿದೆ ಎಂದರು.
ಕಳೆದ ವಾರ ನಗರದ ಹೊರವಲಯದ ಹೊಸಕೋಟೆ ಬಳಿಯ ಕೆಎಸ್ಆರ್‌ಪಿ ತರಬೇತಿ ಮೈದಾನದ ಬಳಿ ಗುಂಡು ತಗುಲಿ ರೈತನೊಬ್ಬ ಮೃತಪಟ್ಟ ಘಟನೆಯನ್ನೂ ಕೂಡಾ ಸಿಓಡಿ ತನಿಖೆಗೆ ಒಪ್ಪಿಸಲಾಗಿದೆ. |