ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ತೆರಿಗೆ ವಂಚಕರ ವಿರುದ್ಧ ಕಠಿಣ ಕ್ರಮ:ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೆರಿಗೆ ವಂಚಕರ ವಿರುದ್ಧ ಕಠಿಣ ಕ್ರಮ:ಸಿಎಂ
ಮೌಲ್ಯ ವರ್ದಿತ ತೆರಿಗೆ ವಂಚಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎಚ್ಚರಿಸಿದ್ದಾರೆ.

ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ನಾಗರಬಾವಿಯಲ್ಲಿ ನಿರ್ಮಿಸಲಾಗಿರುವ ತೆರಿಗೆ ಭವನ ಉದ್ಘಾಟಿಸಿ ಅವರು ಮಾತನಾಡಿದರು.

ಕೆಲವು ವ್ಯಾಪಾರಸ್ಥರು ಹಾಗೂ ಕೈಗಾರಿಕೋದ್ಯಮಿಗಳು ಮೌಲ್ಯವರ್ದಿತ ತೆರಿಗೆಯನ್ನು ಸರಿಯಾಗಿ ಪಾವತಿ ಮಾಡದಿರುವ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದೆ.

20080-09ನೆ ಸಾಲಿನಲ್ಲಿ 20ಸಾವಿರ ಕೋಟಿ ರೂ.ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಕಳೆದ ವರ್ಷ 17ಸಾವಿರ ಕೋಟಿ ರೂ.ತೆರಿಗೆ ಸಂಗ್ರಹಿಸಲಾಗಿದೆ ಎಂದರು.

ತೆರಿಗೆ ಸಂಗ್ರಹ ರಾಜ್ಯದ ಅಭಿವೃದ್ಧಿಗೆ ಮೂಲ ಆಧಾರವಾಗಿರುವುದರಿಂದ ಅಧಿಕಾರಿಗಳು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕೆಂದು ಯಡಿಯೂರಪ್ಪ ಸೂಚಿಸಿದರು.

ತೆರಿಗೆ ಸಂಗ್ರಹಿಸುವ ಕುರಿತಾಗಿ ಈಗಾಗಲೇ ಜಾಗೃತ ತಂಡವನ್ನು ರಚಿಸಲಾಗಿದೆ ಎಂದ ಅವರು, ಅಧಿಕಾರಿಗಳು ಯಾವುದೇ ಕಾರಣಕ್ಕೂ ವ್ಯಾಪಾರಸ್ಥರಿಗೆ ಕಿರುಕುಳ ನೀಡಬಾರದು ಎಂದು ಮನವಿ ಮಾಡಿಕೊಂಡರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಂಜೆ 6ರಿಂದ ಪವರ್ ಕಟ್ ಇಲ್ಲ: ಈಶ್ವರಪ್ಪ
ಚರ್ಚ್‌‌‌ ಬೆಂಕಿ ಪ್ರಕರಣ ಸಿಓಡಿಗೆ
ರಾಜ್ಯದ 5 ನಗರಗಳಲ್ಲಿ ಐಟಿ ಪಾರ್ಕ್
ಲೋಕಾಯುಕ್ತದಿಂದ ಮತ್ತೆ ಭ್ರಷ್ಟರ ಬೇಟೆ
ಚರ್ಚ್ ದಾಳಿ: ಮಹೇಂದ್ರ ವಿರುದ್ಧ ಗೂಂಡಾ ಕಾಯ್ದೆ
ವಿಪ್ರೋ: ಅಪಹರಣದ ರೂವಾರಿ ಕಾರು ಚಾಲಕ