ಹೊನ್ನಾವರ ಸಮೀಪದ ಮಂಕಿ ಬಳಿ ಬುಧವಾರ ಸಂಜೆ ಬಸ್ ಹಾಗೂ ಬೊಲೆರೋ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಭಟ್ಕಳ ಶಾಸಕ ಜೆ.ಡಿ.ನಾಯಕ್ ತೀವ್ರವಾಗಿ ಗಾಯಗೊಂಡಿದ್ದಾರೆ.ಹೊನ್ನಾವರದ ಅನಂತವಾಡಿ ಬಳಿ, ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಬಸ್ ಮತ್ತು ಬೊಲೆರೊ ನಡುವೆ ಸಂಭವಿಸಿರುವ ಈ ಅಪಘಾತದಲ್ಲಿ ಶಾಸಕರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಮುರ್ಡೇಶ್ವರದ ಆರ್.ಎನ್.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಮಣಿಪಾಲ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ.ಜೆ.ಡಿ. ನಾಯಕ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು. |
|