ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸ್ಪೀಡ್ ಗವರ್ನರ್ ಆದೇಶ ವಾಪಸ್:ಸಚಿವ ಸಂಪುಟ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಪೀಡ್ ಗವರ್ನರ್ ಆದೇಶ ವಾಪಸ್:ಸಚಿವ ಸಂಪುಟ
ತೀವ್ರ ವಿವಾದಕ್ಕೆ ಎಡೆಯಾಗಿದ್ದ ಸ್ಪೀಡ್ ಗವರ್ನರ್ ಆದೇಶವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವಾಪಸ್ ಪಡೆಯಲಾಗಿದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಸಾರಿಗೆ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ರಾಜ್ಯಕ್ಕೆ ಈ ಅಳವಡಿಕೆ ಬಗ್ಗೆ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಸಭೆಯು ಕೇಂದ್ರ ಸರ್ಕಾರವನ್ನು ಏಕರೂಪದ ಕಾನೂನು ಈ ಬಗ್ಗೆ ಜಾರಿಗೆ ತಂದಲ್ಲಿ ಕರ್ನಾಟಕ ಕೂಡ ಈ ಆದೇಶವನ್ನು ಜಾರಿಗೆ ತರಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಈ ಕಾಯಿದೆಯು ದೆಹಲಿ ಮತ್ತು ಕೇರಳದಲ್ಲಿ ಮಾತ್ರ ಜಾರಿಯಲ್ಲಿದ್ದು ಮತ್ಯಾವುದೇ ರಾಜ್ಯದಲ್ಲಿ ಜಾರಿಯಲ್ಲಿ ಇಲ್ಲದ ಕಾರಣ ಅಂತರ ರಾಜ್ಯ ವಾಹನ ಸಂಚಾರಕ್ಕೆ ತೊಂದರೆಯಾಗಿ ರಾಜ್ಯಕ್ಕೆ ರೆವಿನ್ಯೂ ನಷ್ಟ ಉಂಟಾಗುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು:

ರಾಜ್ಯದಿಂದ ಹೆಚ್ಚುವರಿ ಕಾಂಪ್ಲೆಕ್ಸ್ ಗೊಬ್ಬರ ಪೂರೈಕೆ:

ರಾಜ್ಯಕ್ಕೆ ಹೆಚ್ಚುವರಿ ಕಾಂಪ್ಲೆಕ್ಸ್ ಗೊಬ್ಬರ ಸರಬರಾಜು ಮಾಡುವ ಉದ್ದೇಶದಿಂದ ಮೆ ಫ್ಯಾಕ್ಟ್ ಸಂಸ್ಥೆಗೆ ಹೆಚ್ಚುವರಿ ಆರ್ಥಿಕ ಧನಸಹಾಯವನ್ನು ಮಾರ್ಕೆಟಿಂಗ್ ಫೆಡರೇಷನ್ ಮುಖಾಂತರ ನೀಡಲು ಸರ್ಕಾರ ನಿರ್ಧರಿಸಿದೆ.

ಸುಮಾರು 200 ಕೋಟಿ ರೂ. ಗಳನ್ನು ಮಾರ್ಕೆಟಿಂಗ್ ಫೆಡರೇಷನ್ ನೀಡಬೇಕಾಗಿದ್ದು, ಬ್ಯಾಂಕು ಇದಕ್ಕಾಗಿ ಸಾಲ ನೀಡುತ್ತಿದ್ದು ಸರ್ಕಾರವು ಬ್ಯಾಂಕಿಗೆ ಗ್ಯಾರಂಟಿಯಾಗಿರುತ್ತದೆ. ಮಾಸಿಕ 16000 ಟನ್ ಗೊಬ್ಬರವನ್ನ ಪೂರೈಸುವ ವ್ಯವಸ್ಥೆಯನ್ನು ಈ ಮೂಲಕ ಮಾಡಲಾಗುತ್ತಿದೆ.

ಗ್ರಾಮೀಣ ಆಶಾ:

ಸರ್ಕಾರವು ಬಜೆಟ್‌ನಲ್ಲಿ ಘೋಷಣೆಮಾಡಿದಂತೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ನಿರ್ಮಿಸಲಾಗುವ ಮನೆಗಳ ವೆಚ್ಚವನ್ನ 30,000 ರಿಂದ 40,000 ಕ್ಕೆ ಹೆಚ್ಚಳ ಮಾಡಿದ್ದು, ಈ 10,000 ರೂ ಗಳನ್ನ ಸರ್ಕಾರವು ಭರಿಸುತ್ತದೆ. 2000-01 ರಿಂದ 2008 ರ ಜುಲೈ ವರೆಗೆ ಈ ಯೋಜನೆಯಡಿ 10.07 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ.

ಕಬ್ಬು ಬೆಳಗಾರರಿಗೆ ವಿಶೇಷ ನೆರವು:

ಕಬ್ಬು ಬೆಳೆಗಾರರಿಗೆ ವಿಶೇಷ ನೆರವಿನ ರೂಪದಲ್ಲಿ ಟನ್‌‌ಗೆ 160 ರೂ. ಕೊಡುವ ನಿರ್ಧಾರವನ್ನ ಸರ್ಕಾರ ಈ ಹಿಂದೆ ತೆಗೆದುಕೊಂಡು ಕಾರ್ಖಾನೆಗಳ ಮಾಲೀಕರಿಗೆ ಈ ಬಗ್ಗೆ ಸೂಚನೆ ನೀಡಿತ್ತು.

ಅದರಲ್ಲಿ 28 ಸಕ್ಕರೆ ಕಾರ್ಖಾನೆಗಳು ಟನ್ 100 ರೂ ನಂತೆ ನೀಡಿದ್ದು, ಉಳಿದ 23 ಸಕ್ಕರೆ ಕಾರ್ಖಾನೆಗಳು ಯಾವುದೇ ಹಣವನ್ನ ರೈತರಿಗೆ ಪಾವತಿ ಮಾಡಿಲ್ಲ. ಈ ಹಣ ಪಾವತಿಗೆ ನೆರವಾಗಲು ಕಡಿಮೆ ಬಡ್ಡಿ ದರದಲ್ಲಿ ಸಾಲವಾಗಿ 130 ಕೋಟಿ ರೂ ಗಳನ್ನು ಸರ್ಕಾರವು ನೀಡಲು ನಿರ್ಧರಿಸಿದೆ.

ಮೂರ್ತೆದಾರಿಗೆ ಸಾಲ ನೆರವು:

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಿಂದುಳಿದ ವರ್ಗದವರಾದ ಮೂರ್ತೆದಾರರಿಗೆ (ಬಿಲ್ಲವ ಜನಾಂಗ) ಶೇಕಡಾ 6 ರ ಬಡ್ಡಿದರದಲ್ಲಿ ಸಾಲ ನೀಡಲು ನಿರ್ಧರಿಸಲಾಗಿದೆ. ಶೇಂದಿಯನ್ನು ಅಬಕಾರಿ ಕಾಯಿದೆಯಿಂದ ಹೊರಗೆ ಇಟ್ಟು ಜಿಲ್ಲಾಧಿಕಾರಿಗಳ ಪೂರ್ಣ ನಿಯಂತ್ರಣದಲ್ಲಿಡುವ ನಿರ್ಧಾರವನ್ನು ಮೂರ್ತೆದಾರರನ್ನ ಅನಗತ್ಯ ಶೋಷಣೆಯಿಂದ ರಕ್ಷಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಾಗಿದೆ.

ಶಿವರಾಮ ಕಾರಂತ ನೂತನ ಬಡಾವಣೆ:

ಬೆಂಗಳೂರು ಅಭಿವೃದ್ದಿ ಪ್ರಾಧಿಕಾರವು ನಿರ್ಮಿಸುತ್ತಿರುವ ನೂತನ ಬಡಾವಣೆಗೆ ಡಾ ಶಿವರಾಮ ಕಾರಂತ ಬಡಾವಣೆ ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದೆ.

ಯಲಹಂಕ ಮತ್ತು ಯಶವಂತಪುರ ಮಧ್ಯದಲ್ಲಿ 18 ಹೋಬಳಿಗಳನ್ನು ಒಳಗೊಂಡಂತೆ 3456 ಎಕರೆ ಪ್ರದೇಶದಲಿ 1847 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಿರುವ ಈ ಬಡಾವಣೆಯಲ್ಲಿ 18,975 ನಿವೇಶನಗಳನ್ನ ನಿರ್ಮಿಸಲಾಗುತ್ತದೆ.

ಕುಕ್ಕೆ ಸುಬ್ರಮಣ್ಯ ದೇವಾಲಯದ ಸಮಗ್ರ ಅಭಿವೃದ್ದಿ:

ದಕ್ಷಿಣ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಕುಕ್ಕೆ ಸುಬ್ರಮಣ್ಯ ದೇವಾಲಯದ ಸಮಗ್ರ ಅಭಿವೃದ್ದಿಗಾಗಿ 180 ಕೋಟಿ ರೂ. ಗಳನ್ನು ನೀಡಲು ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದ್ದು, ಮೊದಲನೇ ಹಂತದಲ್ಲಿ 60 ಕೋಟಿ ರೂ ಗಳ ಕಾಮಗಾರಿಗಳಿಗೆ ಅನುಮತಿ ನೀಡಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಪಘಾತ : ಭಟ್ಕಳ ಶಾಸಕರಿಗೆ ತೀವ್ರ ಗಾಯ
ತೆರಿಗೆ ವಂಚಕರ ವಿರುದ್ಧ ಕಠಿಣ ಕ್ರಮ:ಸಿಎಂ
ಸಂಜೆ 6ರಿಂದ ಪವರ್ ಕಟ್ ಇಲ್ಲ: ಈಶ್ವರಪ್ಪ
ಚರ್ಚ್‌‌‌ ಬೆಂಕಿ ಪ್ರಕರಣ ಸಿಓಡಿಗೆ
ರಾಜ್ಯದ 5 ನಗರಗಳಲ್ಲಿ ಐಟಿ ಪಾರ್ಕ್
13 ಭ್ರಷ್ಟರು ಲೋಕಾಯುಕ್ತ ಬಲೆಗೆ