ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಶೀಘ್ರವೇ ನಗರಾಭಿವೃದ್ಧಿ ನೀತಿ:ಸುರೇಶ್ ಕುಮಾರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೀಘ್ರವೇ ನಗರಾಭಿವೃದ್ಧಿ ನೀತಿ:ಸುರೇಶ್ ಕುಮಾರ್
ನಗರೀಕರಣಕ್ಕೆ ಒಂದು ಸ್ಫಷ್ಟ ರೂಪ ನೀಡುವ ನಿಟ್ಟಿನಲ್ಲಿ ನಗರಾಭಿವೃದ್ದಿ ನೀತಿಯನ್ನು ಸಿದ್ಧಗೊಳಿಸಲಾಗುತ್ತಿದೆ. ಇನ್ನು ಮೂರು ತಿಂಗಳಲ್ಲಿ ಕರಡು ನೀತಿಯನ್ನು ಸಾರ್ವಜನಿಕರ, ನಗರಾಭಿವೃದ್ದಿ ತಜ್ಞರ, ಸ್ವಯಂಸೇವಾ ಸಂಸ್ಥೆಗಳ ಚರ್ಚೆಗೆ ಒಳಪಡಿಸಿ, ಸಲಹೆಗಳನ್ನು ಪಡೆದು ನಂತರ ಒಂದು ತಿಂಗಳೊಳಗೆ ನಗರಾಭಿವೃದ್ದಿ ನೀತಿಯನ್ನು ಜಾರಿಗೆ ತರಲಾಗುವುದೆಂದು ನಗರಾಭಿವೃದ್ದಿ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದರು.

ನೂತನ ನೀತಿಯನ್ನು ನಿವೃತ್ತ ಮುಖ್ಯ ಕಾರ್ಯದರ್ಶಿ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಎ. ರವೀಂದ್ರ ಅವರು ರಚಿಸುತ್ತಿದ್ದು, ಇದುವರೆಗಿನ ಪ್ರಗತಿಯನ್ನು ಪರಿಶೀಲಿಸಲು ಯೂನಿಟಿ ಕಟ್ಟಡದಲ್ಲಿರುವ ಕೆ.ಯು.ಐ.ಡಿ.ಎಫ್‌‌ಸಿಯಲ್ಲಿ ನಡೆದ ಸಭೆಯ ಸಂದರ್ಭದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಸಾರ್ವಜನಿಕರ ಚರ್ಚೆಗೆ ಒಳಪಡಿಸುವ ಮುಖ್ಯ ಉದ್ದೇಶ ಈ ನೀತಿ ಸರ್ಕಾರದ ನೀತಿಯಾಗಬಾರದು ಎಂದರು.

ಕರ್ನಾಟಕ ರಾಜ್ಯದಲ್ಲಿ 24 ಮೊದಲನೆ ದರ್ಜೆ ಪಟ್ಟಣಗಳಲ್ಲಿ ಶೇ.34 ರಷ್ಟು ಜನಸಂಖ್ಯೆ ಇದ್ದರೆ ಬೇರೆ ರಾಜ್ಯಗಳಲ್ಲಿ ಶೇ 28 ರಷ್ಟಿದೆ. ಇದೇ ರೀತಿ ಪಟ್ಟಣಗಳ ಬೆಳವಣಿಗೆ ಮುಂದುವರಿದರೆ 2035 ಇಸವಿಯೊಳಗೆ ಶೇ. 50ರಷ್ಟು ಜನಸಂಖ್ಯೆ ರಾಜ್ಯದ ಪಟ್ಟಣಗಳಲ್ಲಿರುತ್ತವೆ.

ಹೀಗಾಗಿ ಮೊದಲು ಅಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಬಳಿಕವೇ ಅಲ್ಲಿ ಪಟ್ಟಣಗಳ ಅಭಿವೃದ್ದಿ ಹೊಂದಬೇಕು. ಬೆಂಗಳೂರಿನಲ್ಲಿ ಇದು ವ್ಯತಿರಿಕ್ತವಾಗಿದೆ. ಇದು ಬೇರೆ ಪಟ್ಟಣಗಳಲ್ಲೂ ಮರುಕಳಿಸಬಾರದು ಎಂಬ ಉದ್ದೇಶ ಸರ್ಕಾರದ್ದಾಗಿದೆ ಎಂದರು.

ಕಳಪೆ ರಸ್ತೆಗಳ ನಿರ್ಮಾಣ ಹಾಗೂ ಇನ್ನಿತರ ಯಾವುದೇ ಭ್ರಷ್ಟಾಚಾರದ ಪ್ರಕರಣಗಳಿದ್ದಲ್ಲಿ ಸಾರ್ವಜನಿಕರು ನೇರವಾಗಿ ಸಚಿವರಿಗೆ ದೂರು ನೀಡಬಹುದಾಗಿದೆ. ಈ ಸಂಬಂಧವಾಗಿ ಜನರಿಗೆ ಮಾಹಿತಿ ನೀಡಲು ನಗರಾಭಿವೃದ್ದಿ ಕಚೇರಿಗಳ ಮುಂದೆ ಫಲಕಗಳನ್ನು ಅಳವಡಿಸಿ ಆ ಮೂಲಕ ಅವರಿಗೆ ಜಾಗೃತಿ ಮೂಡಿಸಲಾಗುವುದು ಎಂದರು.

ಭ್ರಷ್ಟಾಚಾರ ಹಾಗೂ ಕರ್ತವ್ಯ ಲೋಪದ ಆಪಾದನೆ ಎದುರಿಸುತ್ತಿರುವ ಗುಲ್ಬರ್ಗಾ ನಗರಪಾಲಿಕೆಯ ಆಯುಕ್ತರ ಮುಧೋಳ್ ಅವರ ಮೇಲೆ ಶಿಸ್ತಿನ ಕ್ರಮಕ್ಕಾಗಿ ಆದೇಶಿಸಲಾಗಿದೆ. ಮಂಗಳೂರು ನಗರಪಾಲಿಕೆಯ ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ ಅವರನ್ನು ಅಮಾನತಿನಲ್ಲಿರಿಸಲಾಗಿದೆ ಹಾಗೂ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಲಿಂಗೇಗೌಡ ಅವರನ್ನು ಇಲಾಖೆ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಎ. ರವೀಂದ್ರ ಅವರು ಮಾತನಾಡಿ, ಇಡೀ ರಾಜ್ಯಕ್ಕೆ ಒಂದು ನೀತಿ ಇರಬೇಕು, ನೀತಿಯಲ್ಲಿ ನಗರೀಕರಣ ವೈಜ್ಞಾನಿಕವಾಗಿ ಕ್ರಮಬದ್ಧವಾಗಿರಬೇಕು ಹಾಗೂ ಇದಕ್ಕೆ ಸಂಬಂಧಿಸಿದಂತೆ ಬೇರೆ ಪಟ್ಟಣಗಳಿಗೂ ಪ್ರಾಮುಖ್ಯತೆ ನೀಡಲಾಗುವುದು. ಬೆಂಗಳೂರಿನ ಜನಸಂಖ್ಯೆಯನ್ನು ಕಡಿಮೆಗೊಳಿಸುವ ದೃಷ್ಟಿಯಿಂದ ಆನೇಕಲ್, ರಾಮನಗರಗಳಂತಹ ಪಟ್ಟಣಗಳ ಬೆಳವಣಿಗೆಗೆ ಒತ್ತು ನೀಡಲಾಗುವುದೆಂದು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸ್ಪೀಡ್ ಗವರ್ನರ್ ಆದೇಶ ವಾಪಸ್:ಸಚಿವ ಸಂಪುಟ
ಅಪಘಾತ : ಭಟ್ಕಳ ಶಾಸಕರಿಗೆ ತೀವ್ರ ಗಾಯ
ತೆರಿಗೆ ವಂಚಕರ ವಿರುದ್ಧ ಕಠಿಣ ಕ್ರಮ:ಸಿಎಂ
ಸಂಜೆ 6ರಿಂದ ಪವರ್ ಕಟ್ ಇಲ್ಲ: ಈಶ್ವರಪ್ಪ
ಚರ್ಚ್‌‌‌ ಬೆಂಕಿ ಪ್ರಕರಣ ಸಿಓಡಿಗೆ
ರಾಜ್ಯದ 5 ನಗರಗಳಲ್ಲಿ ಐಟಿ ಪಾರ್ಕ್