ಲೋಕಸಭಾ ಸದಸ್ಯತ್ವಕ್ಕೆ ಇತ್ತೀಚೆಗೆ ರಾಜೀನಾಮೆ ಸಲ್ಲಿಸಿದ ಉಡುಪಿ ಬಿಜೆಪಿ ಸಂಸದೆ ಮನೋರಮಾ ಮಧ್ವರಾಜ್ ಅವರು, ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರಿಗೆ ಉಪಕಾರ ಮಾಡಿದ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿ ಸೇರಿದ್ದಕ್ಕೆ ಪಶ್ಚಾತ್ತಾಪವಾಗುತ್ತಿದೆ. ಲೋಕಸಭೆ ಯಲ್ಲಿ ಅಣು ಒಪ್ಪಂದ ಮಸೂದೆಯ ಮಂಡನೆ ನನಗೆ ಬಿಜೆಪಿಯನ್ನು ಬಿಡುವುದಕ್ಕೆ ದೇವರ ವರದಂತೆ ಒದಗಿ ಬಂತು ಎಂದು ಅವರು ಹೇಳಿದರು.
ಬಿಜೆಪಿ ನಾಯಕರಿಂದ ಆದ ಅವಮಾನದಿಂದ ಬೇಸತ್ತು ಬಿಜೆಪಿಯನ್ನು ಬಿಡುತ್ತಿದ್ದೇನೆ. ಬಿಜೆಪಿಯಿಂದ ಆರಿಸಲ್ಪಟ್ಟಿರುವ ತಾನು ಲೋಕಸಭೆಗೆ ರಾಜೀನಾಮೆ ನೀಡಿದ್ದು, ಬಿಜೆಪಿ ಸಹವಾಸಕ್ಕೆ ಗುಡ್ ಬೈ ಹೇಳಿ,ಮತ್ತೆ 'ಕೈ' ಹಿಡಿಯುವುದಾಗಿ ಹೇಳಿದರು.
ಮನೋರಮಾ ಪಕ್ಷ ಬಿಟ್ಟಿದ್ದು ಒಳ್ಳೆದಾಯ್ತು: ಮನೋರಮಾ ಪಕ್ಷ ಬಿಟ್ಟರೆ ಬಿಜೆಪಿಗೆ ಒಳ್ಳೆಯದಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಚುಟುಕಾಗಿ ಉತ್ತರಿಸಿದರು. |