ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕಾಂಗ್ರೆಸ್ ಬಿಡಲಾರೆ: ಸಿದ್ದರಾಮಯ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್ ಬಿಡಲಾರೆ: ಸಿದ್ದರಾಮಯ್ಯ
ನಾನು ಕಾಂಗ್ರೆಸ್‌ನಲ್ಲಿ ಅತೃಪ್ತಿಗೊಂಡಿದ್ದೇನೆ. ಆದ್ದರಿಂದ ಅಹಿಂದ ಕಟ್ಟುತ್ತೇನೆ ಅಥವಾ ಬಿಜೆಪಿ ಸೇರುತ್ತೇನೆ ಎನ್ನುವುದು ಊಹಾಪೋಹಾ. ನಾನು ಇರುವಲ್ಲಿಯೇ ನನಗೆ ತೃಪ್ತಿ ಇದೆ ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಯಾರ ಮೇಲೂ ಅಸಮಾಧಾನವಿಲ್ಲ. ದೇಶಪಾಂಡೆ ನನ್ನ ಒಳ್ಳೆಯ ಸ್ನೇಹಿತ ಎಂದರು. ನನ್ನ ರಾಜಕೀಯ ನಿಲುವಿನ ಬಗ್ಗೆ ನನಗೆ ಯಾವುದೇ ಗೊಂದಲವಿಲ್ಲ.

ಮಾಧ್ಯಮಗಳಲ್ಲಿ ಇವೆಲ್ಲಾ ಸೃಷ್ಟಿಯಾಗುತ್ತಿವೆ. ಬಿಜೆಪಿಯ ಇಬ್ಬರು ಸಚಿವರು ನನ್ನನ್ನು ಭೇಟಿಯಾಗಿರುವುದು ನಿಜ. ಇದರಿಂದ ನಾನು ಬಿಜೆಪಿ ಸೇರುತ್ತೇನೆ ಎನ್ನುವ ಅರ್ಥವಲ್ಲ. ಅದೊಂದು ಸೌಜನ್ಯದ ಭೇಟಿ ಎಂದರು.

ಒಬ್ಬ ರಾಜಕಾರಣಿ ಮತ್ತೊಂದು ಪಕ್ಷದ ರಾಜಕಾರಣಿಯನ್ನು ಭೇಟಿ ಮಾಡಬಾರದು ಅಂತ ಏನಿಲ್ಲ. ಬಂದು ಟೀ ಕುಡಿದು ಹರಟೆ ಹೊಡೆದು ಹೋದರು ಅಷ್ಟೇ ಎಂದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಅವರಿಬ್ಬರನ್ನೂ ಬೆಂಬಲಿಸುತ್ತೇನೆ ಎನ್ನುವುದು ಸರಿಯಲ್ಲ. ನಾನು ಕಾಂಗ್ರೆಸ್‌‌ನಲ್ಲಿದ್ದೇನೆ. ಇನ್ನೊಂದು ಪಕ್ಷದವರನ್ನು ಬೆಂಬಲಿಸುವುದು ಹೇಗೆ ಎಂದು ಹೇಳಿದರು.

ಮೈತ್ರಿ ವಿಷಯದಲ್ಲಿ ಪ್ರತಿಕ್ರಿಯಿಸಿದ ಅವರು, ಮೈತ್ರಿ ಬೇಡವೆಂದು ನಾನು ಹೇಳಿದ್ದೇನೆ. ಆದರೆ ಉಳಿದ ವಿಚಾರ ಹೈಕಮಾಂಡ್‌‌ಗೆ ಬಿಟ್ಟಿದ್ದು. ಮುಖ್ಯಮಂತ್ರಿಗಳ ಕಾರ್ಯವೈಖರಿ ಸರಿಯಿಲ್ಲ ಎಂದಷ್ಟೇ ಪ್ರತಿಕ್ರಿಯಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮತ್ತೆ 'ಕೈ' ಹಿಡಿಯುವೆ: ಮನೋರಮಾ
ಸಚಿವರ ಕಾರ್ಯವೈಖರಿ ಬಗ್ಗೆ ತೃಪ್ತಿ: ಸಿಎಂ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಗತ್ಯವಿಲ್ಲ:ಸಿದ್ದರಾಮಯ್ಯ
ಶೀಘ್ರವೇ ನಗರಾಭಿವೃದ್ಧಿ ನೀತಿ:ಸುರೇಶ್ ಕುಮಾರ್
ಸ್ಪೀಡ್ ಗವರ್ನರ್ ಆದೇಶ ವಾಪಸ್:ಸಚಿವ ಸಂಪುಟ
ಅಪಘಾತ : ಭಟ್ಕಳ ಶಾಸಕರಿಗೆ ತೀವ್ರ ಗಾಯ