ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿರುವ ನಟ ಜಗ್ಗೇಶ್ ತುರುವೇಕೆರೆ ಉಪಚುನಾವಣೆಯಲ್ಲಿ ಸ್ಪರ್ಧಿಸುವುದು ಅನಿಶ್ಚಿತವಾಗಿದೆ. ತುರುವೆಕೆರೆಯಲ್ಲಿ ತಮ್ಮ ಛಾಪಿದೆ. ತಮ್ಮ ಅಭಿಮಾನಿಗಳ ಮತಗಳಿವೆ ಎಂದು ಅವರು ತಿಳಿಸಿದ್ದಾರೆ.
ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ಜಗ್ಗೇಶ್ ಭರವಸೆ ನೀಡಿದರು. ಮುಖ್ಯಮಂತ್ರಿಯವರ ಅಭಿವೃದ್ದಿಪರ ಕಾಳಜಿ ಕಂಡು ತಾನು ಬಿಜೆಪಿ ಸೇರಿರುವೆ. ಪಕ್ಷ ಯಾವ ತೀರ್ಮಾನ ಕೈಗೊಂಡರು ಅದಕ್ಕೆ ಬದ್ಧ ಎಂದರು.ತಮ್ಮ ಸ್ಪರ್ಧೆಯನ್ನು ಪಕ್ಷ ನಿರ್ಧರಿಸಲಿದೆ ಎಂದು ಅವರು ಹೇಳಿದರು.
ನೈತಿಕ ಹಕ್ಕಿಲ್ಲ: ಕೃಷ್ಣೇ ಬೈರೇಗೌಡರಿಗೆ ನನ್ನ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ನಾನು ಸ್ವಂತ ಶಕ್ತಿಯಿಂದ ಮೇಲೆ ಬಂದವನು. ಕೃಷ್ಣೇಬೈರೇಗೌಡರ ತರಹ ಅಪ್ಪನ ಹೆಸರು ಹೇಳಿಕೊಂಡು ಮೇಲೆ ಬಂದವನಲ್ಲ. ಬೈರೇಗೌಡ ತೆಗೆದರೆ ಉಳಿಯುವುದು ಬರೀ ಶೂನ್ಯ ಎಂದು ತಿರುಗೇಟು ನೀಡಿದ್ದಾರೆ. |