ಚಂದ್ರಯಾನ ಯಶಸ್ವಿಗೆ ಕಾರಣಿಭೂತರಾದ ವಿಜ್ಞಾನಿಗಳಿಗೆ ರಾಜ್ಯ ಸರ್ಕಾರದ ವತಿಯಿಂದ ಸದ್ಯದಲ್ಲೇ ವಿಶೇಷವಾಗಿ ಸನ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಮುಂದುವರಿದ ರಾಷ್ಟ್ರಗಳಲ್ಲಿ ಮಾತ್ರ ನಡೆಯುತ್ತಿದ್ದ ಸಾಧನೆಗಳನ್ನು ಭಾರತದಲ್ಲೂ ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ಸಮಸ್ತ ಕನ್ನಡಿಗರ ಪರವಾಗಿ ಅಭಿನಂದಿಸುವುದಾಗಿ ಅವರು ಹೇಳಿದರು.
ಈ ರೀತಿಯ ಸಾಹಸದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ವಿಜ್ಞಾನಿಗಳು ದೇಶಕ್ಕೆ ಹೆಮ್ಮೆ ತರುವ ಕೆಲಸ ಮಾಡಿದ್ದಾರೆ. ವಿಜ್ಞಾನಿಗಳಿಗೆ ಅಗತ್ಯ ಪ್ರೋತ್ಸಾಹ ಹಾಗೂ ಸೌಲಭ್ಯ ಒದಗಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ ಯುವ ಸಂಸತ್ ಸದಸ್ಯರನ್ನು ಭೇಟಿ ಮಾಡಿದೆ. ಅಮೆರಿಕದಲ್ಲಿ ನಡೆದ ಯುವ ಸಂಸತ್ ಸದಸ್ಯರ ಸಭೆಯಲ್ಲಿ ಮಾತನಾಡಿದ ಅಲ್ಲಿನ ಅಧ್ಯಕ್ಷರು, ಬರುವ ದಿನಗಳಲ್ಲಿ ಅತೀ ಬುದ್ದಿವಂತ , ತೀಕ್ಷ್ಣಮತಿಗಳಾದ ಬೆಂಗಳೂರಿಗರಿಂದ ಅಮೆರಿಕದ ಯುವಕರು ಸ್ಪರ್ಧೆ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದನ್ನು ಯುವ ಸಂಸದರು ತಮ್ಮ ಗಮನಕ್ಕೆ ತಂದರು ಎಂದ ಮುಖ್ಯಮಂತ್ರಿ ಅಮೆರಿಕ್ಕೆ ಪೈಪೋಟಿ ಒಡ್ಡುವಷ್ಟು ಭೌತಿಕ ಶಕ್ತಿ ನಮ್ಮ ಯುವಕರಲ್ಲಿದೆ ಎಂಬುದು ಹೆಮ್ಮೆಯ ವಿಷಯ ಎಂದರು.
|