ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಆಪರೇಶನ್ ಕಮಲ:ಮಂಡ್ಯ ನಗರಸಭೆ ಬಿಜೆಪಿ ತೆಕ್ಕೆಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಪರೇಶನ್ ಕಮಲ:ಮಂಡ್ಯ ನಗರಸಭೆ ಬಿಜೆಪಿ ತೆಕ್ಕೆಗೆ
ರಾಜ್ಯ ರಾಜಕಾರಣದಲ್ಲಿ ಆಪರೇಶನ್ ಕಮಲದ ಮೂಲಕ ಪಕ್ಷ ಬಲಪಡಿಸಲು ಹೊರಟಿರುವ ಆಡಳಿತರೂಢ ಬಿಜೆಪಿ, ಇದೀಗ ಮಂಡ್ಯ ನಗರಸಭೆಯನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಇದರೊಂದಿಗೆ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳಿಗೆ ಶಾಕ್ ನೀಡಿರುವ ಬಿಜೆಪಿ, ನಗರಸಭೆಯ 17ಮಂದಿ ಸದಸ್ಯರು ಗುರುವಾರ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಮತ್ತು ಸಚಿವ ಕರುಣಾಕರ ರೆಡ್ಡಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಇದರೊಂದಿಗೆ ಮಂಡ್ಯ ನಗರಸಭೆ ಮೊದಲ ಬಾರಿಗೆ ಬಿಜೆಪಿ ವಶಕ್ಕೆ ಬಂದಂತಾಗಿದೆ.

ಒಟ್ಟು 35 ಸದಸ್ಯ ಬಲದ ಮಂಡ್ಯ ನಗರಸಭೆಯಲ್ಲಿ 21 ಜೆಡಿಎಸ್ ಸದಸ್ಯರು, ಮೂರು ಮಂದಿ ಕಾಂಗ್ರೆಸ್, ಇಬ್ಬರು ಬಿಜೆಪಿ ಹಾಗೂ ಒಂಬತ್ತು ಮಂದಿ ಪಕ್ಷೇತರರಿದ್ದರು.

ಇದೀಗ ಜೆಡಿಎಸ್‌ನ 9, ಕಾಂಗ್ರೆಸ್‌ನ 3, ಐವರು ಪಕ್ಷೇತರರು ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ. ಅಧ್ಯಕ್ಷರ ಅವಧಿ ಇನ್ನು ಒಂದು ತಿಂಗಳಿದ್ದು, ಅವಿಶ್ವಾಸ ಗೊತ್ತುವಳಿಗೆ ಸಿದ್ದತೆ ನಡೆದಿದೆ.

ಕಾಂಗ್ರೆಸ್‌ನ ಬೋರೇಗೌಡ, ಲೋಕೇಶ್, ನಾಗಮಣಿ ರಾಜಣ್ಣ, ಪಕ್ಷೇತರರಾದ ಮಂಜುನಾಥ್, ಚಲುವರಾಜ್, ಶಂಕರೇಗೌಡ, ಕುರಂಪಾಷಾ ಮತ್ತು ಉಪಾಧ್ಯಕ್ಷ ರಮೇಶ್ ಬಿಜೆಪಿಗೆ ಸೇರ್ಡಡೆಗೊಂಡಿದ್ದಾರೆ. ಅಲ್ಲದೇ ನಾಳೆ ನಗರಸಭೆಯ ಇನ್ನೂ ನಾಲ್ವರು ಸದಸ್ಯರು ಬಿಜೆಪಿ ಸೇರಲಿದ್ದಾರೆ ಎಂದು ಅಧ್ಯಕ್ಷ ಸದಾನಂದ ಗೌಡ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರಗತಿ ಪರಿಶೀಲನೆಗೆ ಸಿಎಂ ನಗರ ಪ್ರದಕ್ಷಿಣೆ !
ಚಂದ್ರಯಾನ-ವಿಜ್ಞಾನಿಗಳಿಗೆ ಸನ್ಮಾನ:ಸಿಎಂ
ನಟ ಜಗ್ಗೇಶ್ ಸ್ಪರ್ಧೆ ಅನಿಶ್ಚಿತ
ಕಾಂಗ್ರೆಸ್ ಬಿಡಲಾರೆ: ಸಿದ್ದರಾಮಯ್ಯ
ಮತ್ತೆ 'ಕೈ' ಹಿಡಿಯುವೆ: ಮನೋರಮಾ
ಸಚಿವರ ಕಾರ್ಯವೈಖರಿ ಬಗ್ಗೆ ತೃಪ್ತಿ: ಸಿಎಂ