ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವಿದ್ಯುತ್ ಕಡಿದ ಶೀಘ್ರ ಹಿಂದಕ್ಕೆ : ಈಶ್ವರಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿದ್ಯುತ್ ಕಡಿದ ಶೀಘ್ರ ಹಿಂದಕ್ಕೆ : ಈಶ್ವರಪ್ಪ
ನಗರದ ಕೈಗಾರಿಕಾ ಪ್ರದೇಶಗಳಲ್ಲಿ ವಾರದಲ್ಲಿ ಒಂದು ದಿನ ವಿದ್ಯುತ್ ಕಡಿತಗೊಳಿಸುವ ವ್ಯವಸ್ಥೆ ತಾತ್ಕಾಲಿಕವಾಗಿದ್ದು, ವಿದ್ಯುತ್ ಉತ್ಪಾದನೆಯಲ್ಲಿ ಗುರಿ ಸಾಧಿಸಿದ ನಂತರ ವಿದ್ಯುತ್ ಕಡಿತ ನಿರ್ಧಾರವನ್ನು ಹಿಂಪಡೆಯುತ್ತೇವೆ ಎಂದು ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ಭರವಸೆ ನೀಡಿದ್ದಾರೆ.

ರಾಜಭವನದಲ್ಲಿ ನಡೆದ ಕೆಇಆರ್‌‌ಸಿಗೆ ನೇಮಕಗೊಂಡ ಸದಸ್ಯರ ಪ್ರಮಾಣ ವಚನ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ನಗರದಲ್ಲಿ ಸರದಿಯಂತೆ ಒಂದೊಂದು ಪ್ರದೇಶದಲ್ಲಿ ವಾರಕ್ಕೊಂದು ದಿನ ವಿದ್ಯುತ್ ಕಡಿತಗೊಳಿಸುವ ಯೋಜನೆ ಜಾರಿಗೆ ಬಂದಿದ್ದು, ಈ ಕ್ರಮದಿಂದಾಗಿ ಪ್ರತಿ ದಿನ 100 ಮೆಗಾ ವ್ಯಾಟ್ ವಿದ್ಯುತ್ ಉಳಿತಾಯ ಮಾಡಲಾಗುತ್ತಿದೆ.

ಜನತೆಗೆ ಉತ್ತಮ ವಿದ್ಯುತ್ ನೀಡುವಲ್ಲಿ ರಾಜ್ಯ ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಥರ್ಮಲ್ ಪ್ಲ್ಯಾಂಟ್‌‌‌ಗಳಿಗೆ ಕಲ್ಲಿದ್ದಲು ಪೂರೈಕೆಯಾಗುತ್ತಿದ್ದು, ವಿದ್ಯುತ್ ಕೊರತೆ ಇನ್ನು ಕೆಲವೇ ದಿನಗಳಲ್ಲಿ ನೀಗಲಿದೆ ಎಂದು ತಿಳಿಸಿದರು.

ರೈತರಿಗೆ ನಿರಂತರ 6 ಗಂಟೆಗಳ ವಿದ್ಯುತ್ ನೀಡಲು ಸರ್ಕಾರ ಬದ್ಧವಾಗಿದೆ ಹಾಗೂ ಈಗಾಗಲೇ ವಿದ್ಯುತ್ ನೀಡುತ್ತಿದೆ ಎಂದ ಅವರು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಂಜೆ 6ರಿಂದ 10 ಗಂಟೆವರೆಗೆ ಸಿಂಗಲ್ ಫೇಸ್ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಬಳ್ಳಾರಿ ಥರ್ಮಲ್ ಪವರ್ ಪ್ಲ್ಯಾಂಟ್‌‌‌ ಸಿದ್ಧವಾಗಿದ್ದು, ನವೆಂಬರ್ 3ರಂದು ಉದ್ಘಾಟನೆಗೊಳ್ಳಲಿದೆ. ಸಂಸತ್ತಿನ ವಿರೋಧ ಪಕ್ಷದ ನಾಯಕ ಎಲ್.ಕೆ. ಆಡ್ವಾಣಿ ಉದ್ಘಾಟಿಸಲಿದ್ದು, ಕೇಂದ್ರ ಸಚಿವ ಸುಶೀಲ್ ಕುಮಾರ್ ಸಿಂಧೆ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಭಾಗವಹಿಸಲಿದ್ದಾರೆ.

ಬಳ್ಳಾರಿಯ ಥರ್ಮಲ್ ಪವರ್ ಪ್ಲ್ಯಾಂಟ್‌‌‌ ಘಟಕವನ್ನು 400 ಮೆ.ವ್ಯಾಟ್ ನಿಂದ 500 ಮೆ. ವ್ಯಾಟ್ ಸಾಮರ್ಥ್ಯಕ್ಕೆ ಹೆಚ್ಚಿಸಲು ಎಲ್ಲಾ ಸಿದ್ಧತೆ ನಡೆದಿದ್ದು, ಇನ್ನೊಂದು ತಿಂಗಳಲ್ಲಿ ಇದು ಕಾರ್ಯಗತಗೊಳ್ಳಲಿದೆ ಎಂದು ಈಶ್ವರಪ್ಪ ವಿವರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತಾಲೂಕು ಪಂಚಾಯ್ತಿ ರದ್ದಾಗದು: ಸಿಎಂ
ಆಪರೇಶನ್ ಕಮಲ:ಮಂಡ್ಯ ನಗರಸಭೆ ಬಿಜೆಪಿ ತೆಕ್ಕೆಗೆ
ಪ್ರಗತಿ ಪರಿಶೀಲನೆಗೆ ಸಿಎಂ ನಗರ ಪ್ರದಕ್ಷಿಣೆ !
ಚಂದ್ರಯಾನ-ವಿಜ್ಞಾನಿಗಳಿಗೆ ಸನ್ಮಾನ:ಸಿಎಂ
ನಟ ಜಗ್ಗೇಶ್ ಸ್ಪರ್ಧೆ ಅನಿಶ್ಚಿತ
ಕಾಂಗ್ರೆಸ್ ಬಿಡಲಾರೆ: ಸಿದ್ದರಾಮಯ್ಯ