ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಶಾಸ್ತ್ರೀಯ ಸ್ಥಾನ:ನಾಳೆ ರಾಜಭವನ ಮುತ್ತಿಗೆ-ಕರವೇ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಾಸ್ತ್ರೀಯ ಸ್ಥಾನ:ನಾಳೆ ರಾಜಭವನ ಮುತ್ತಿಗೆ-ಕರವೇ
ಕನ್ನಡಕ್ಕೆ ಕೂಡಲೇ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರು ಶುಕ್ರವಾರ ರಾಜಭವನಕ್ಕೆ ಮುತ್ತಿಗೆ ಹಾಕುವುದಾಗಿ ತಿಳಿಸಿದೆ.

ಬೆಳಿಗ್ಗೆ 11ಕ್ಕೆ ಸರ್ಕಾರಿ ಕಲಾ ಕಾಲೇಜು ಮೈದಾನದಲ್ಲಿ ವೇದಿಕೆಯ ಅಧ್ಯಕ್ಷ ಟಿ.ಎ. ನಾರಾಯಣಗೌಡ ಅವರ ನೇತೃತ್ವದಲ್ಲಿ ಸಾವಿರಾರು ಮಂದಿ ಕಾರ್ಯಕರ್ತರು ಸೇರಿ ಅಲ್ಲಿಂದ ರಾಜಭವನದತ್ತ ತೆರಳುವುದಾಗಿ ಹೇಳಿದ್ದಾರೆ.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ ವರ್ಷಗಳಿಂದ ನಡೆಯುತ್ತಿರುವ ಪ್ರತಿಭಟನೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ರಾಜಭವನಕ್ಕೆ ಮುತ್ತಿಗೆ ಹಾಕುವ ಮೂಲಕ ಹೋರಾಟವನ್ನು ತೀವ್ರಗೊಳಿಸುವುದಾಗಿ ನಾರಾಯಣಗೌಡ ತಿಳಿಸಿದರು.

ಸಾಹಿತಿ ದೇ. ಜವರೇಗೌಡ ಅವರು ಆರಂಭಿಸಿದ ಶಾಸ್ತ್ರೀಯ ಸ್ಥಾನಮಾನದ ಹೋರಾಟವನ್ನು ಒಂದಲ್ಲ ಒಂದು ರೀತಿಯಲ್ಲಿ ವೇದಿಕೆ ಕಾರ್ಯಕರ್ತರು ಮುಂದುವರಿಸಿದ್ದು, ಅದನ್ನು ಉಗ್ರರೂಪಕ್ಕೆ ಕೊಂಡೊಯ್ಯುತ್ತೇವೆ.

ಬೆಂಗಳೂರಿನಲ್ಲಿ ರಾಜಭವನ ಮುತ್ತಿಗೆ ನಡೆದರೆ ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕು ಕೇಂದ್ರಗಳಲ್ಲಿ ವೇದಿಕೆ ಕಾರ್ಯಕರ್ತರು ಕೇಂದ್ರ ಸರ್ಕಾರಿ ಕಚೇರಿಗಳ ಮೇಲೆ ಮುತ್ತಿಗೆ ಹಾಕಲಿದ್ದಾರೆ.

ಕೇಂದ್ರ ಸರ್ಕಾರ ಕನ್ನಡಕ್ಕೆ ತಡಮಾಡದೇ ಕೂಡಲೇ ಶಾಸ್ತ್ರೀಯ ಸ್ಥಾನಮಾನ ನೀಡದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಕೇಂದ್ರವೇ ಹೊಣೆಯಾಗಬೇಕಾಗುತ್ತದೆ ಎಂದು ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿದ್ಯುತ್ ಕಡಿದ ಶೀಘ್ರ ಹಿಂದಕ್ಕೆ : ಈಶ್ವರಪ್ಪ
ತಾಲೂಕು ಪಂಚಾಯ್ತಿ ರದ್ದಾಗದು: ಸಿಎಂ
ಆಪರೇಶನ್ ಕಮಲ:ಮಂಡ್ಯ ನಗರಸಭೆ ಬಿಜೆಪಿ ತೆಕ್ಕೆಗೆ
ಪ್ರಗತಿ ಪರಿಶೀಲನೆಗೆ ಸಿಎಂ ನಗರ ಪ್ರದಕ್ಷಿಣೆ !
ಚಂದ್ರಯಾನ-ವಿಜ್ಞಾನಿಗಳಿಗೆ ಸನ್ಮಾನ:ಸಿಎಂ
ನಟ ಜಗ್ಗೇಶ್ ಸ್ಪರ್ಧೆ ಅನಿಶ್ಚಿತ