ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕನ್ನಡ ನಾಮಫಲಕ ಹಾಕದಿದ್ದರೆ ಜೈಲು: ಬಚ್ಚೇಗೌಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕನ್ನಡ ನಾಮಫಲಕ ಹಾಕದಿದ್ದರೆ ಜೈಲು: ಬಚ್ಚೇಗೌಡ
ಮುಂದಿನ ತಿಂಗಳಿನಿಂದ ಕನ್ನಡದಲ್ಲಿ ನಾಮಫಲಕ ಇಲ್ಲದಿದ್ದರೆ ದಂಡ ಅಥವಾ ಜೈಲು ಶಿಕ್ಷೆ ಖಚಿತ! ಈ ಕುರಿತು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.

ಕನ್ನಡ ನಾಮಫಲಕ ಕಡ್ಡಾಯದ ಕುರಿತು ಅಕ್ಟೋಬರ್ 30ರಂದು ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಕಾರ್ಮಿಕ ಸಚಿವ ಬಿ.ಎಚ್. ಬಚ್ಚೇಗೌಡ ಹೇಳಿದ್ದಾರೆ.

ನಗರದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಆದೇಶ ಉಲ್ಲಂಘಿಸಿದವರಿಗೆ 10 ಸಾವಿರ ರೂ. ದಂಡ/ ಜೈಲು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ, ರಾಜ್ಯೋತ್ಸವ ದಿನವಾದ ನವೆಂಬರ್ 1ರಂದು ಕೇಂದ್ರ ಸರ್ಕಾರಿ ಸಂಸ್ಥೆಗಳನ್ನು ಹೊರತು ಪಡಿಸಿ ಎಲ್ಲಾ ರಾಜ್ಯ ಮತ್ತು ಖಾಸಗಿ ಸಂಘ-ಸಂಸ್ಥೆಗಳು, ಕಂಪೆನಿಗಳು, ಕೈಗಾರಿಕೆ ಮತ್ತಿತರ ಕೇಂದ್ರ ಸಂಸ್ಥೆಗಳು ಸಾರ್ವಜನಿಕ ರಜೆ ಘೋಷಿಸಬೇಕು. ಈ ಕುರಿತು ಯಾವುದೇ ಸಂಘ-ಸಂಸ್ಥೆ, ಕಂಪೆನಿಗಳು ಹಾಗೂ ಕೈಗಾರಿಕೆಗಳು ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸೂಚನೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೈತ್ರಿಗೆ ಸಿದ್ದರಾಮಯ್ಯ ವಿರೋಧ:ಖರ್ಗೆ
ಈಶ್ವರಪ್ಪ ಹೇಳಿಕೆಗೆ ವಿಶ್ವನಾಥ್ ಆಕ್ರೋಶ
ಶಾಸ್ತ್ರೀಯ ಸ್ಥಾನ: ದೆಹಲಿಗೆ ನಿಯೋಗ-ಸಿಎಂ
ಸಮಸ್ಯೆ ನಿವಾರಣೆಗೆ ಉತ್ತಮ ಶಿಕ್ಷಣ ಮದ್ದು:ಆಡ್ವಾಣಿ
ಬೆಂಗಳೂರು:ಬಹುಮಹಡಿ ಕಟ್ಟಡ ಕುಸಿತ
ಶಾಸ್ತ್ರೀಯ ಸ್ಥಾನ:ನಾಳೆ ರಾಜಭವನ ಮುತ್ತಿಗೆ-ಕರವೇ