ಹಾಲಿನ ದರಗಳ ಕುರಿತು ಹಾಲು ಉತ್ಪಾದಕರ ಒಕ್ಕೂಟ ಹಾಗೂ ಸರ್ಕಾರದ ನಡುವಿನ ಒಳಜಗಳ ಮುಂದುವರಿಯುತ್ತಿರುವಂತೆ ಪ್ರೋತ್ಸಾಹ ಧನ ನೀಡುವ ಯೋಜನೆಗೆ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.
ಈ ಸಂಬಂಧ ಪ್ರತಿ ಲೀಟರ್ ಹಾಲಿಗೆ 2 ರೂ. ಪ್ರೋತ್ಸಾಹ ಧನವು ಬಿಜೆಪಿ ರಾಜ್ಯದಲ್ಲಿ ನೂರು ದಿನ ಪೂರೈಸಿದ ದಿನವಾದ ಸೆಪ್ಟೆಂಬರ್ 9ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಘೋಷಿಸಿತ್ತು.
ಯೋಜನೆ ಜಾರಿಗಾಗಿ ರಾಜ್ಯ ಸರ್ಕಾರ 32.50 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಸರ್ಕಾರ ತಿಳಿಸಿದೆ. ಹಾಲಿಗೆ ಪ್ರೋತ್ಸಾಹ ಧನ ನೀಡುವುದಾದರೆ ಹಾಲಿನ ದರವನ್ನು ಏರಿಕೆ ಮಾಡಬೇಕೆಂದು ಹಾಲು ಉತ್ಪಾದಕರ ಒಕ್ಕೂಟ ಆಗ್ರಹಿಸಿತ್ತು.
ಆದರೆ ಇದನ್ನು ತಳ್ಳಿ ಹಾಕಿದ ಸರ್ಕಾರ ರೈತರ ಹಿತದೃಷ್ಟಿಯಿಂದ ಹಾಲಿಗೆ ಪ್ರೋತ್ಸಾಹ ಧನ ಅಗತ್ಯವಾಗಿದ್ದು, ಇದನ್ನು ಸರ್ಕಾರ ಭರಿಸುತ್ತದೆ ಎಂದು ಸ್ಪಷ್ಟಪಡಿಸಿತ್ತು. |