ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ತಾರತಮ್ಯ: ಪ್ರಧಾನಿಗೆ ಯಡಿಯೂರಪ್ಪ ಪತ್ರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಾರತಮ್ಯ: ಪ್ರಧಾನಿಗೆ ಯಡಿಯೂರಪ್ಪ ಪತ್ರ
ಅಭಿವೃದ್ಧಿ ದೃಷ್ಟಿಯಲ್ಲಿ ಕರ್ನಾಟಕದ ಜನತೆಯ ನ್ಯಾಯಯುತ ಬೇಡಿಕೆ ಹಾಗೂ ಸಮಾನತೆಯ ಹಕ್ಕನ್ನು ಕೇಂದ್ರದ ಯುಪಿಎ ಸರ್ಕಾರ ಕಡೆಗಣಿಸಿ,ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆಪಾದಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಪ್ರಧಾನಿಗಳಿಗೆ ಬರೆದಿರುವ ಪತ್ರದ ನಕಲನ್ನು ಗುರುವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು, ಅದರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಹಾಗೂ ಹೈದರಾಬಾದ್ ಕರ್ನಾಟಕ ವಿಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವಲ್ಲಿ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಧೋರಣೆಯನ್ನು ಖಾರವಾಗಿ ಟೀಕಿಸಿದ್ದಾರೆ.

ಈ ಎರಡು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ನವೆಂಬರ್ 5ರಂದು, ಹಿರಿಯ ಅಧಿಕಾರಿಗಳ ಗಮನವನ್ನು ಸಾಕಷ್ಟು ಸರ ಸೆಳೆಯಲಾಗಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ದೊರಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ಸಲ ನಿಮ್ಮನ್ನು ನವದೆಹಲಿಯಲ್ಲಿ ಭೇಟಿ ಮಾಡಿದ್ದಾಗಲೂ ಇವೆರಡು ಬೇಡಿಕೆಗಳ ಬಗ್ಗೆ ಗಮನ ಸೆಳೆದು ತುರ್ತಾಗಿ ಕ್ರಮ ತೆಗೆದುಕೊಳ್ಳಿ ಎಂದು ಕೋರಿದ್ದೆ ಎನ್ನುವ ವಿಷಯವನ್ನು ಸಹ ಜ್ಞಾಪಿಸಿದ್ದಾರೆ.

ಕಳೆದ ವರ್ಷ ತಮಿಳಿಗೆ ಶಾಸ್ತ್ರೀಯ ಸ್ಥಾನ ದೊರಕಿದೆ. ಆದರೆ ಕನ್ನಡಕ್ಕೂ ಶಾಸ್ತ್ರೀಯ ಸ್ಥಾನ ನೀಡುವಂತೆ ಮಾಡಿರುವ ಅರ್ಹ ಬೇಡಿಕೆಯನ್ನು ಕೇಂದ್ರ ಸರ್ಕಾರ ಗಣನೆಗೆ ತೆಗೆದುಕೊಂಡಿಲ್ಲ. ಇದೇ ರೀತಿ ಅತಿ ಹಿಂದುಳಿದ ಹೈದರಾಬಾದ್ ಕರ್ನಾಟಕಕ್ಕ ವಿಶೇಷ ಸ್ಥಾನ ನೀಡುವಂತೆ ಮಾಡಿರುವ ಮನವಿಯನ್ನು ಪರಿಗಣಿಸಿಲ್ಲ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದಿವಾಕರ್ ಬಾಬುಗೆ ಷರತ್ತು ಬದ್ಧ ಜಾಮೀನು
8 ಸಾವಿರ ಶಿಕ್ಷಕರ ನೇಮಕ: ಕಾಗೇರಿ
ಕಾಂಗ್ರೆಸ್ ಏಕಾಂಗಿ ಹೋರಾಟ ನಡೆಸಲಿ: ದೇವೇಗೌಡ
ರಾಜಭವನಕ್ಕೆ ಕರವೇ ಮುತ್ತಿಗೆ
ಸರ್ಕಾರದಿಂದ ಸೇಡಿನ ರಾಜಕಾರಣ: ಎಂ.ಪಿ.ಪ್ರಕಾಶ್
ಹಾಲಿಗೆ ಪ್ರೋತ್ಸಾಹ ಧನ:ಸರ್ಕಾರ