ಪೇಜಾವರಶ್ರೀಗಳ ಶಾಪದಿಂದ ನಾವು ಬೀದಿಗೆ ಬಿದ್ದಿದ್ದರೆ, ಅವರ ಆಶೀರ್ವಾದ ಪಡೆದ ಉಮಾಭಾರತಿ, ವಾಜಪೇಯಿ, ಆಡ್ವಾಣಿ ಏನಾಗಿದ್ದಾರೆ ಎಂದು ಕಟುವಾಗಿ ಪ್ರಶ್ನಿಸಿರುವ ಮಾಜಿ ಸಚಿವ ವಿಶ್ವನಾಥ್, ಈಗ ಅವರು ಅಧಿಕಾರ ಕಳೆದುಕೊಂಡು ಬೀದಿಗೆ ಬಿದ್ದಿಲ್ಲವೆ ಎಂದು ತಿರುಗೇಟು ನೀಡಿದ್ದಾರೆ.
ಪೇಜಾವರಶ್ರೀಗಳ ಶಾಪದಿಂದ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಎಚ್.ವಿಶ್ವನಾಥ್ ಬೀದಿಗೆ ಬಿದ್ದಿದ್ದಾರೆ ಎಂಬ ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಪ್ರಜಾಪ್ರಭುತ್ವ ಜಾರಿಗೆ ಬಂದು ಆರು ದಶಕ ಕಳೆದರೂ ಈಶ್ವರಪ್ಪ ಇನ್ನೂ ಶೂದ್ರರಂತೆ ಮಾತನಾಡುತ್ತಾರೆ. ಪೇಜಾವರಶ್ರೀಗಳ ಸಾಮೀಪ್ಯದಲ್ಲಿ ಸಚಿವರೊಬ್ಬರು ಈ ರೀತಿ ಮಾತನಾಡುವುದು ಶೋಭೆ ತರುವ ವಿಚಾರವಲ್ಲ. ಈ ಕುರಿತು ಶ್ರೀಗಳು ಈಶ್ವರಪ್ಪನಂತವರಿಗೆ ಬುದ್ದಿ ಹೇಳಬೇಕು ಎಂದರು.
ಇಂತಹ ಅಪದ್ಧ ಹೇಳಿಕೆಗಳನ್ನು ನೀಡುವ ಮೂಲಕ ಅವರು ಹಿಂದುಳಿದ ಜನಾಂಗಗಳ ನಡುವೆ ಒಡಕನ್ನು ಉಂಟುಮಾಡಲು ಹೊರಟಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು. |