ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕಟ್ಟಡ ಕುಸಿತ: ಘಟನೆ ವಿರುದ್ಧ ಪಾಲಿಕೆ ದೂರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಟ್ಟಡ ಕುಸಿತ: ಘಟನೆ ವಿರುದ್ಧ ಪಾಲಿಕೆ ದೂರು
ನಗರದ ಹೂಡಿ ಸಮೀಪ ಕುಸಿದು ಬಿದ್ದ ಶಾಂತಿನಿಕೇತನ ಕಟ್ಟಡ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆಗೆ ಗುರಿಪಡಿಸಿದ್ದಾರೆ.

ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಿಸಲಾಗುತ್ತಿತ್ತು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದೀಗ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದೆ.

ಕಟ್ಟಡ ಕುಸಿದು ಎರಡು ದಿನಗಳ ನಂತರ ಪಾಲಿಕೆ ಈ ಕ್ರಮ ಕೈಗೊಂಡಿದ್ದು, ಈ ಸಂಬಂಧ ತನಿಖೆ ನಡೆಸಲು ಕೋರಿದೆ.

ತನಿಖೆಗೆ ಆದೇಶ:ಪ್ರಿಸ್ಟೇಜ್ ಸಂಸ್ಥೆ ಗುತ್ತಿಗೆ ಪಡೆದಿರುವ ಶಾಂತಿನಿಕೇತನ ಕಟ್ಟಡ ಗುರುವಾರ ಕುಸಿದು ಬಿದ್ದಿತ್ತು. ಈ ಸಂಬಂಧ ಮಹಾನಗರ ಪಾಲಿಕೆ ಮತ್ತು ಅಗ್ನಿಶಾಮಕ ಸಿಬ್ಬಂದಿ ಸಮಗ್ರ ವರದಿ ನೀಡುವಂತೆ ನಗರ ಪೊಲೀಸ್ ಆಯುಕ್ತ ಶಂಕರ್ ಬಿದರಿ ಆದೇಶ ನೀಡಿದ್ದಾರೆ.

ಈ ಸಂಬಂಧ ಯೋಜನೆ ಕೈಗೆತ್ತಿಕೊಂಡಿದ್ದ ಸಂಸ್ಥೆಯ ಸಿಬ್ಬಂದಿ ಇಬ್ಬರನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪೇಜಾವರಶ್ರೀ ಶಾಪದಿಂದ ಬೀದಿಗೆ ಬಿದ್ದಿಲ್ಲ: ವಿಶ್ವನಾಥ್
ಕೋಮುಶಕ್ತಿ ಮಣಿಸಲು ಮೈತ್ರಿ ಅಗತ್ಯ: ಕಾಂಗ್ರೆಸ್
ಉಪಚುನಾವಣೆ: ಜೆಡಿಎಸ್ 4 ಸ್ಥಾನಕ್ಕೆ ಸ್ಪರ್ಧೆ
ಗೌಡರ ಹೇಳಿಕೆ-ಪ್ರತಿಕ್ರಿಯೆಗೆ ಖರ್ಗೆ ನಕಾರ
ವಿಜ್ಞಾನಿಗಳಿಗೆ ಯಡಿಯೂರಪ್ಪ ಅಭಿನಂದನೆ
ಬಿಜೆಪಿಯಿಂದ ಮಠಗಳ ದುರುಪಯೋಗ: ಖರ್ಗೆ ಆರೋಪ