ರಾಜಕೀಯ ವಲಯದಲ್ಲಿ ತೀವ್ರ ವಿವಾದ ಹುಟ್ಟಿಸಿದ ಗಣಿ ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಅಕ್ರಮ ಗಣಿಗಾರಿಕೆ ತನಿಖೆ ಪೂರ್ಣಗೊಂಡಿರುವುದಾಗಿ ಲೋಕಾಯುಕ್ತ ಶನಿವಾರ ತಿಳಿಸಿದೆ.
ಅಕ್ರಮ ಗಣಿಗಾರಿಕೆ ನಡೆಸಿ ಪ್ರಕೃತಿ ಸಂಪತ್ತು ನುಂಗಿರುವ ಗಣಿಧಣಿಗಳ ಒಳಮುಖವನ್ನು ಬಹಿರಂಗಪಡಿಸಲು ಲೋಕಾಯುಕ್ತ ಸಜ್ಜುಗೊಂಡಿದ್ದು, ಈ ತಿಂಗಳಲ್ಲೇ ವರದಿ ಬಹಿರಂಗ ಪಡಿಸುವ ಸೂಚನೆ ನೀಡಿದೆ.
ಸಾಕಷ್ಟು ಅಕ್ರಮ ಸಂಪತ್ತು ಗಳಿಕೆಯ ಮೂಲವಾಗಿರುವ ಗಣಿ ಉದ್ಯಮ ಸರ್ಕಾರಕ್ಕೂ ಬಿಸಿ ತುಪ್ಪವಾಗಿ ಕೊನೆಗೂ ಲೋಕಾಯುಕ್ತ ತನಿಖೆಗೆ ಒಳಪಡಿಸಿತ್ತು.
ಈಗ ತನಿಖೆ ಪೂರ್ಣಗೊಂಡು ವರದಿ ಸಿದ್ಧವಾಗಿದೆ. ಸಾಕಷ್ಟು ಅಕ್ರಮಗಳು ಬಯಲಾಗುವ ಸಾಧ್ಯತೆ ಇದೆ. ಈ ಕುರಿತು ವಿವರಣೆ ನೀಡಿರುವ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಭ್ರಷ್ಟರನ್ನು ಹಿಡಿದರೂ ಸಹ ಸರ್ಕಾರದಿಂದ ಶಿಕ್ಷೆಯಾಗುವುದು ವಿಳಂಬ. ಆದರೂ, ಯಾವುದಕ್ಕೂ ಅಂಜದೆ, ಅಳುಕದೆ ಲೋಕಾಯುಕ್ತ ಅಕ್ರಮ ಗಣಿ ಪತ್ತೆ ಹಾಗೂ ತನಿಖೆಯನ್ನು ಪೂರ್ಣಗೊಳಿಸುತ್ತದೆ ಎಂದು ತಿಳಿಸಿದ್ದಾರೆ. |