ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಹುಮಹಡಿ ಕುಸಿತ: ಬಿದರಿ ಸ್ಪಷ್ಟನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಹುಮಹಡಿ ಕುಸಿತ: ಬಿದರಿ ಸ್ಪಷ್ಟನೆ
ಶಾಂತಿನಿಕೇತನ ಬಹುಮಹಡಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಹುಮಹಡಿ ಕುಸಿತ ಪ್ರಕರಣದಲ್ಲಿ ನಾಲ್ವರು ಗಾಯಗೊಂಡಿದ್ದು, ಪ್ರಾಣಾಹಾನಿ ಸಂಭವಿಸಿಲ್ಲ ಎಂದು ಪೊಲೀಸ್ ಆಯುಕ್ತ ಶಂಕರ್ ಬಿದರಿ ಸ್ಪಷ್ಟಪಡಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವಿವಾದಗಳು ಹುಟ್ಟಿಕೊಂಡ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇದುವರೆಗೆ 218 ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದ್ದು, ಪ್ರಿಸ್ಟೀಜ್ ಕಂಪೆನಿಯ 6 ಮಂದಿಯನ್ನು ಬಂಧಿಸಿ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ, ಈ ಘಟನೆ ನಡೆಯುವ ಮುನ್ನಾದಿನ ಒರಿಸ್ಸಾ ಮೂಲದ ಕಾರ್ಮಿಕನೊರ್ವ ಕಾಣೆಯಾಗಿದ್ದು, ಆತನ ಹುಡುಕಾಟಕ್ಕಾಗಿ ಪೊಲೀಸ್ ತಂಡ ಒರಿಸ್ಸಾಗೆ ತೆರಳಿದೆ ಎಂದು ತಿಳಿಸಿದ್ದಾರೆ.

ಈ ನಡುವೆ ಇನ್ನೆರಡು ದಿನಗಳ ಬಳಿಕ ಕಟ್ಟಡ ತೆರವುಗೊಳಿಸುವ ಕಾರ್ಯ ಪ್ರಾರಂಭಗೊಳ್ಳಲಿದೆ ಎಂದು ತಿಳಿಸಿದ ಅವರು, ಈಗಾಗಲೇ ಅಗ್ನಿಶಾಮಕ ದಳದ ಕಾರ್ಯಾಚರಣೆ ಪ್ರಾರಂಭಿಸಿದೆ ಎಂದು ತಿಳಿಸಿದರು.

ಈ ಪ್ರಕರಣದ ಕುರಿತು ತನಿಖೆ ನಡೆಸಲು ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಪಚುನಾವಣೆಗೆ ಜಗ್ಗೇಶ್ ಸ್ಫರ್ಧೆ ಇಲ್ಲ
ಕಿತ್ತೂರು ಉತ್ಸವದಲ್ಲಿ ರಾಜಕಾರಣಿಗಳ ಚಕಮಕಿ
ಅಕ್ರಮ ಗಣಿಗಾರಿಕೆ ತನಿಖೆ ಪೂರ್ಣ: ಲೋಕಾಯುಕ್ತ
ಕಟ್ಟಡ ಕುಸಿತ: ಘಟನೆ ವಿರುದ್ಧ ಪಾಲಿಕೆ ದೂರು
ಪೇಜಾವರಶ್ರೀ ಶಾಪದಿಂದ ಬೀದಿಗೆ ಬಿದ್ದಿಲ್ಲ: ವಿಶ್ವನಾಥ್
ಕೋಮುಶಕ್ತಿ ಮಣಿಸಲು ಮೈತ್ರಿ ಅಗತ್ಯ: ಕಾಂಗ್ರೆಸ್