ದೀಪಾವಳಿಯ ಸಂಭ್ರಮ ಮುಗಿಲು ಮುಟ್ಟುತ್ತಿದ್ದಂತೆ, ಪಟಾಕಿಯ ಅಬ್ಬರಕ್ಕೆ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.ಗಾಯಗೊಂಡವರನ್ನು ಮಿಂಟೋ, ನಾರಾಯಣ ನೇತ್ರಾಲಯ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಕಾಕ್ಸ್ ಟೌನ್ ಮಿಲ್ತಿನ ಎಂಬ 8 ವರ್ಷದ ಬಾಲಕ ಪಟಾಕಿ ಹಚ್ಚುವ ವೇಳೆ ಕಣ್ಣಿಗೆ ಪಟಾಕಿ ಸಿಡಿದು ಕಣ್ಣು ಕಳೆದುಕೊಂಡಿದ್ದಾನೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.ಹಲಸೂರಿನ ಹರ್ಷವರ್ಧನ ಎಂಬುವವನು ಆಟಂ ಬಾಂಬ್ ಸಿಡಿದು ಮುಖಪೂರ್ತಿ ಸುಟ್ಟುಹೋಗಿದೆ. ಹೀಗೆ ಅನೇಕರು ಪಟಾಕಿ ಸಿಡಿತದಿಂದಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. |
|