ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನ.5ರಂದು ಕಾಂಗ್ರೆಸ್ ಸಭೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ.5ರಂದು ಕಾಂಗ್ರೆಸ್ ಸಭೆ
ಮುಂಬರುವ ಎಂಟು ವಿಧಾನಸಭಾ ಉಪಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ನವೆಂಬರ್ 5ರಂದು ನಗರದಲ್ಲಿ ಕಾಂಗ್ರೆಸ್ ಪಕ್ಷ ಸಭೆ ನಡೆಸಲಿದೆ.

ಈ ಸಂಬಂಧ ನವೆಂಬರ್ 5ರಂದು ಯಲಹಂಕದಲ್ಲಿ ಸಭೆ ಆಯೋಜಿಸಿದ್ದು, ಕಾಂಗ್ರೆಸ್‌‌‌‌‌ನ ಹಿರಿಯ ಮುಖಂಡರು ಭಾಗವಹಿಸಿಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅಲ್ಲದೆ, ಅಂದಿನ ಸಭೆಗೆ ಶಾಸಕರು, ವಿಧಾನಸಪರಿಷತ್ ಸದಸ್ಯರು, ಜಿಲ್ಲಾಧ್ಯಕ್ಷರು ಸೇರಿದಂತೆ ಹಲವರು ಭಾಗವಹಿಸಲಿದ್ದು, ಮುಂದಿನ ಚುನಾವಣೆಯಲ್ಲಿ ಪಕ್ಷದ ಸಂಘಟನೆ ಹಾಗೂ ಕಾರ್ಯತಂತ್ರ ರೂಪಿಸಲಾಗುವುದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಆಯ್ಕೆ ಕುರಿತು ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಆರ್. ವಿ. ದೇಶಪಾಂಡೆ, ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮೇಲ್ಮನೆ ಪ್ರತಿಪಕ್ಷ ನಾಯಕ ಉಗ್ರಪ್ಪ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದಿವಾಳಿ: ಪಟಾಕಿ ಸ್ಫೋಟ-20ಮಂದಿಗೆ ಗಾಯ
ದಾಳಿ: ಸರ್ಕಾರದ ವಿರುದ್ಧ ಸಾಂಗ್ಲಿಯಾನ ವಾಗ್ದಾಳಿ
ನಿಗದಿತ ಸಮಯದಲ್ಲೇ ರಾಜ್ಯೋತ್ಸವ ಪ್ರಶಸ್ತಿ: ಸಿಎಂ
ಆಪರೇಶನ್ ಕಮಲಕ್ಕೆ ರೆಡ್ಡಿಗಳ ಹಣ: ಕುಮಾರಸ್ವಾಮಿ
ಶಾಸ್ತ್ರೀಯ ಸ್ಥಾನ: ವಿಪಕ್ಷ ಹೇಳಿಕೆಗೆ ಖಂಡನೆ
ಸಾರಿಗೆ ಸಂಸ್ಥೆ ಬಸ್-ಬೈಕ್ ಡಿಕ್ಕಿ: 3 ಸಾವು