ಎಪಿಎಂಸಿ ಪೊಲೀಸರು ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಇಬ್ಬರು ಶಂಕಿತ ಉಗ್ರರನ್ನು ಮಂಗಳವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಂಕಿತ ಉಗ್ರರನ್ನು ನಾವಿದ್ ಖಾಜಿ ಹಾಗೂ ನಾಸಿರ್ ರಂಗ್ರೆಜ್ ಎಂದು ಗುರುತಿಸಲಾಗಿದೆ. ನಾವಿದ್ ಖುಸ್ರೋ ನಗರದ ನಿವಾಸಿಯಾಗಿದ್ದು, ನಾಸಿರ್ ಅಶೋಕ್ ನಗರ ನಿವಾಸಿ ಎಂದು ತಿಳಿದು ಬಂದಿದೆ. ಇದೇ ವೇಳೆ ಇವರೊಂದಿಗಿದ್ದ ಎನ್ನಲಾಗಿರುವ ಇನ್ನೊಬ್ಬ ಶಂಕಿತ ಉಗ್ರ ಶಕೀಲ್ ನ ಹುಡುಕಾಟಕ್ಕಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಬಂಧಿತ ಉಗ್ರರಿಂದ ಗೋದ್ರಾ ಹತ್ಯಾಕಾಂಡ ಕುರಿತಾದ ಸಿಡಿ ಹಾಗೂ ಭಯೋತ್ಪಾದನೆ ಪ್ರಚೋದಿಸುವಂಹ ಹಲವು ಪುಸ್ತಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶಂಕಿತ ಉಗ್ರರನ್ನು ಇಂದು 4ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅಕ್ಟೋಬರ್ 30ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಶಂಕಿತ ಉಗ್ರರು ರಾಜ್ಯದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಹುನ್ನಾರ ನಡೆಸಿದ್ದರು. ಹಾಗೆಯೇ, ಭಯೋತ್ಪಾದಕ ಕೃತ್ಯ ನಡೆಸುವಂತೆ ಯುವಕರಿಗೆ ಪ್ರಚೋದನೆ ನೀಡುತ್ತಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ. |