ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪಾಟೀಲ್, ಬೆಳೆಗೆರೆಗೆ ರಾಜ್ಯೋತ್ಸವ ಪ್ರಶಸ್ತಿ ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಟೀಲ್, ಬೆಳೆಗೆರೆಗೆ ರಾಜ್ಯೋತ್ಸವ ಪ್ರಶಸ್ತಿ ?
ಲಂಡನ್‌ನಲ್ಲಿ ಸೆನೆಟರ್ ಆಗಿರುವ ಕನ್ನಡಿಗ ಡಾ.ನೀರಜ್ ಪಾಟೀಲ್, ಖ್ಯಾತ ಪತ್ರಕರ್ತ ರವಿ ಬೆಳೆಗೆರೆ, ಸಾಹಿತಿ ಬಿ.ಆರ್.ಲಕ್ಷ್ಮಣರಾವ್, ವಿಜ್ಞಾನಿ ಶಿವಕುಮಾರ್ ಸೇರಿದಂತೆ 70 ಮಂದಿಯನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ಸಮಿತಿ ಮತ್ತೊಂದು ಸುತ್ತಿನ ಸಭೆ ನಡೆಸಿ ಪ್ರಶಸ್ತಿಗೆ ಅರ್ಹರ ಹೆಸರನ್ನು ಅಂತಿಮಗೊಳಿಸಲಿದೆ.

ಕರ್ನಾಟಕ ಏಕೀಕರಣವಾಗಿ 52ವರ್ಷಗಳು ತುಂಬಿರುವ ಈ ಸಂದರ್ಭದಲ್ಲಿ 52ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ನಿರ್ಧರಿಸಲಾಗಿತ್ತು. ಆದರೆ ಹೆಚ್ಚಿದ ರಾಜಕೀಯ ಒತ್ತಡದಿಂದಾಗಿ 70ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆದರೆ ಕೊನೆ ಗಳಿಗೆಯಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಥ್ಯತೆ ಇದೆ.

ರಾಜ್ಯೋತ್ಸವ ಪ್ರಶಸ್ತಿಗಳಿಗಾಗಿ ಬಂದಿದ್ದ ಸುಮಾರು 3ಸಾವಿರ ಅರ್ಜಿಗಳ ವಿಲೇವಾರಿ ಮಾಡಿ ಪಟ್ಟಿ ಸಿದ್ದಪಡಿಸಲಾಗಿದೆ. ರಾಜ್ಯೋತ್ಸವ ಪ್ರಶಸ್ತಿ ಇನ್ನೆರಡು ದಿನದಲ್ಲಿ ಪ್ರಕಟವಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವೆಬ್‌ಸೈಟ್ ವಂಚನೆ: ಬಿದರಿ ಎಚ್ಚರಿಕೆ
ಬೆಳಗಾವಿ: ಇನ್ನಿಬ್ಬರು ಶಂಕಿತ ಉಗ್ರರ ಸೆರೆ
ನ.5ರಂದು ಕಾಂಗ್ರೆಸ್ ಸಭೆ
ದೀಪಾವಳಿ: ಪಟಾಕಿ ಸ್ಫೋಟ-20ಮಂದಿಗೆ ಗಾಯ
ದಾಳಿ: ಸರ್ಕಾರದ ವಿರುದ್ಧ ಸಾಂಗ್ಲಿಯಾನ ವಾಗ್ದಾಳಿ
ನಿಗದಿತ ಸಮಯದಲ್ಲೇ ರಾಜ್ಯೋತ್ಸವ ಪ್ರಶಸ್ತಿ: ಸಿಎಂ