ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಶಾಸ್ತ್ರೀಯ ಸ್ಥಾನ: ನ.3ರಂದು ಧರಣಿ-ಕಸಾಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಾಸ್ತ್ರೀಯ ಸ್ಥಾನ: ನ.3ರಂದು ಧರಣಿ-ಕಸಾಪ
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ ಆಗ್ರಹಿಸಿ ನವೆಂಬರ್ 3ರಂದು ಹೋಬಳಿ, ತಾಲೂಕು, ಜಿಲ್ಲಾ ಕೇಂದ್ರ ಹಾಗೂ ರಾಜಧಾನಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಧರಣಿ ನಡೆಸಲಿದೆ ಎಂದು ರಾಜ್ಯಾಧ್ಯಕ್ಷ ಡಾ| ನಲ್ಲೂರು ಪ್ರಸಾದ್ ತಿಳಿಸಿದ್ದಾರೆ.

ಕನ್ನಡಿಗರ ಬಗ್ಗೆ ಕೇಂದ್ರ ಸರ್ಕಾರ ವಿರೋಧಿ ನೀತಿ ಅನುಸರಿಸುತ್ತಿದೆ. ಎಷ್ಟೇ ವಿನಂತಿಸಿಕೊಂಡರೂ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲು ಮೀನ-ಮೇಷ ಎಣಿಸುತ್ತಿದೆ. ಈ ನಿಟ್ಟಿನಲ್ಲಿ ಮೊದಲ ಹಂತದ ಹೋರಾಟವಾಗಿ ಧರಣಿ ನಡೆಯಲಿದೆ ಎಂದು ಅವರು ಖಾಸಗಿ ಸಮಾರಂಭವೊಂದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಅಲ್ಲದೆ, ನವೆಂಬರ್ 5ರಂದು ಮುಖ್ಯಮಂತ್ರಿಯವರು ದೆಹಲಿಗೆ ಕೊಂಡೊಯ್ಯಲಿರುವ ಸರ್ವಪಕ್ಷಗಳ ನಿಯೋಗ ಸೇರಿದಂತೆ ರಾಜ್ಯ ಸರ್ಕಾರ ನಡೆಸುವ ಎಲ್ಲಾ ಹೋರಾಟಕ್ಕೆ ಸಾಹಿತ್ಯ ಪರಿಷತ್ ಬೆಂಬಲ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

ಕನ್ನಡ ಭಾಷೆ, ನೆಲ, ಜಲ ವಿಚಾರಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಒಂದಾಗಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದ ಅವರು, ಪಕ್ಷಕ್ಕಿಂತ ರಾಜ್ಯ ಮುಖ್ಯ ಎಂಬ ಚಿಂತನೆ ಮೂಡಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹೊರಟ್ಟಿಗೆ ಜೆಡಿಎಸ್ ಅಧ್ಯಕ್ಷ ಪಟ್ಟ ?
ಸರ್ವಪಕ್ಷ ನಿಯೋಗದ ಜತೆ ತೆರಳುವುದಿಲ್ಲ: ಖರ್ಗೆ
ಅಧಿಕ ವಿದ್ಯುತ್ ಬಳಕೆ: ದಕ್ಷಿಣ ರಾಜ್ಯಗಳಿಗೆ ಎಚ್ಚರಿಕೆ
ಸಂಪುಟ ವಿಸ್ತರಣೆ ಸುಲಭ-ಪ್ರಶಸ್ತಿ ಆಯ್ಕೆ ಕಷ್ಟ: ಸಿಎಂ
ಪಾಟೀಲ್, ಬೆಳೆಗೆರೆಗೆ ರಾಜ್ಯೋತ್ಸವ ಪ್ರಶಸ್ತಿ ?
ವೆಬ್‌ಸೈಟ್ ವಂಚನೆ: ಬಿದರಿ ಎಚ್ಚರಿಕೆ