ಕಾರ್ಕಳ ತಾಲೂಕಿನ ತಿಂಗಳೆಗೆ ಸುಮಾರು ಏಳು ಮಂದಿ ನಕ್ಸಲೀಯರ ತಂಡವೊಂದು ಭೇಟಿ ನೀಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ತಿಂಗಳೆ ಗರೋಡಿ ಹತ್ತಿರದ ನೆಲ್ಲಿಕಟ್ಟೆ ಪರಿಸರದ ಮನೆಗಳಿಗೆ ಭೇಟಿ ನೀಡಿದ ನಕ್ಸಲರ ತಂಡದಲ್ಲಿ ಮೂವರು ಯುವತಿಯರಿದ್ದರು ಎನ್ನಲಾಗಿದ್ದು, ಇವರು ತಮ್ಮನ್ನು ಬೆಂಗಳೂರಿನವರು ಎಂದು ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ನಕ್ಸಲೀಯರು ಹಲವು ಮನೆಗಳಿಗೆ ಭೇಟಿ ನೀಡಿದ್ದು, ಇವರು ಹಂಚಿರುವ ಕರಪತ್ರಗಳಲ್ಲಿ ಬಿಜೆಪಿ ನಾಯಕರು ಮತ್ತು ಸರ್ಕಾರದ ವಿರುದ್ಧ ಹರಿಹಾಯ್ದಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಅಲ್ಲದೆ, ಹೆಬ್ರಿ ಸೀತಾನದಿ ಭೋಜ ಶೆಟ್ಟಿ ಹತ್ಯೆಯನ್ನು ತಾವೇ ಮಾಡಿರುವುದಾಗಿ ಅವರು ಬರೆದಿರುವ ಕರಪತ್ರದಲ್ಲಿ ತಿಳಿಸಿರುವುದಾಗಿ ಪೊಲೀಸ್ ಮೂಲಗಳು ಹೇಳಿದ್ದು, ಇದೀಗ ಹೆಬ್ರಿ ಸೇರಿದಂತೆ ವಿವಿಧೆಡೆ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. |