ಚರ್ಚ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ರಾಜ್ಯ ಬಜರಂಗದಳದ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ ಜೈಲಿನಲ್ಲಿ ಸುಮ್ಮನೆ ಕುಳಿತಿಲ್ಲ. ದೀಪಾವಳಿಯಂದು ಕಬಡ್ಡಿ ಪಂದ್ಯಾಟವನ್ನು ಪ್ರಾಯೋಜಿಸುವ ಮೂಲಕ ವಿಚಾರಣಾಧೀನ ಕೈದಿಗಳ ಜೊತೆ ದೀಪಾವಳಿ ಹಬ್ಬ ಆಚರಿಸಿದರು.
ಮಹೇಂದ್ರ ಕುಮಾರ್ ಬಂಧನದ ಬಳಿಕ ಜೈಲಿನಲ್ಲಿ ಮುಸ್ಲಿಂ ಕೈದಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪವನ್ನು ನಿವಾರಿಸುವ ನಿಟ್ಟಿನಲ್ಲಿ ಈ ಯತ್ನ ಮಾಡಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.
ಸ್ವಾಮಿ ವಿವೇಕಾನಂದ ಮತ್ತು ಕಿತ್ತೂರು ಚೆನ್ನಮ್ಮ ಎಂಬ ಎರಡು ವಿಜೇತ ತಂಡಗಳಿಗೆ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿಯನ್ನು ಪತ್ರಕರ್ತರಾದ ಹಿಲರಿ ಕ್ರಾಸ್ತಾ ಮತ್ತು ಮಹಮದ್ ಆರಿಫ್ ಟ್ರೋಫಿ ನೀಡಿದರು.
ಕಳೆದ ಕೆಲವು ದಿನಗಳಿಂದ ಮುಸ್ಲಿಂ ಕೈದಿಗಳಿಗೆ ಹಿಂದೂಗಳು ಕಿರುಕುಳ ನೀಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೆ ಮುಸ್ಲಿಂ ಸಂಘಟನೆಯ ನಿಯೋಗ ಜೈಲಿಗೆ ಭೇಟಿ ನೀಡಿತ್ತು. |