ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕಾಂಗ್ರೆಸ್ ಸೋಲು ಪತ್ತೆಗೆ ಸಮಿತಿ: ಡಿಕೆಶಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್ ಸೋಲು ಪತ್ತೆಗೆ ಸಮಿತಿ: ಡಿಕೆಶಿ
ರಾಜ್ಯ ಕಾಂಗ್ರೆಸ್ ಹೆಚ್ಚಿನ ಚೈತನ್ಯ ತುಂಬುವ ಹಾಗೂ ಕಳೆದ ಚುನಾವಣೆಯ ವೈಫಲ್ಯಗಳನ್ನು ಗುರುತಿಸುವ ನಿಟ್ಟಿನಲ್ಲಿ ಸತ್ಯಶೋಧನ ಸಮಿತಿಯೊಂದನ್ನು ರಚಿಸುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಪಕ್ಷದ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಕೆಪಿಸಿಸಿಗೆ ಮತ್ತೆ ಚೈತನ್ಯ ತುಂಬಲು ಅಗತ್ಯ ಕ್ರಮ ಕೈಗೊಂಡಿದ್ದು, ಬರುವ ತಿಂಗಳ 5ರಂದು ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಿಂದ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳನ್ನು ಕರೆದು ಮಾಹಿತಿ ಪಡೆಯಲು ಸಭೆಯೊಂದನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಅಲ್ಲದೆ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪರಾಭವಗೊಂಡ ಕ್ಷೇತ್ರಗಳ ಅಭ್ಯರ್ಥಿಗಳಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪರಾಭವಗೊಂಡ ಕ್ಷೇತ್ರಗಳಲ್ಲಿನ ಲೋಪದೋಷಗಳು, ಸೋಲಿಗೆ ಕಾರಣ ಕುರಿತು ಪತ್ತೆ ಹಚ್ಚುವ ನಿಟ್ಟಿನಲ್ಲಿ ಸತ್ಯ ಶೋಧನಾ ಸಮಿತಿ ರಚಿಸಲಾಗುವುದು ಎಂದು ತಿಳಿಸಿದ ಅವರು, ಈ ಸಮಿತಿ ಪ್ರತಿ ಕ್ಷೇತ್ರಕ್ಕೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದೆ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಹೇಂದ್ರ ಪ್ರಾಯೋಜಕತ್ವದಲ್ಲಿ ಕೈದಿಗಳ ಕಬಡ್ಡಿ !
ಬೆಳಗಾವಿ: ಉಗ್ರರಿಗಾಗಿ ತೀವ್ರ ಶೋಧ
ದೀಪಾವಳಿ: ಗಾಯಗೊಂಡವರ ಸಂಖ್ಯೆ ನೂರಕ್ಕೆ
ಕಾರ್ಕಳಕ್ಕೆ ನಕ್ಸಲ್ ತಂಡ ಭೇಟಿ
ರಾಜಕೀಯ ತೀರ್ಮಾನಕ್ಕೆ ಬೆಂಬಲವಿಲ್ಲ: ಜೆಡಿಎಸ್
ಶಾಸ್ತ್ರೀಯ ಸ್ಥಾನ: ನ.3ರಂದು ಧರಣಿ-ಕಸಾಪ