ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರ ಆಯ್ಕೆ ಬಹುತೇಕ ಪೂರ್ಣಗೊಂಡಿದೆ. ಆದರೆ ಪ್ರಶಸ್ತಿಗೆ ನಡೆದಿರುವ ಪೈಪೋಟಿಯಿಂದ ಈಗಾಗಲೇ ಆಯ್ಕೆಯಾಗಿರುವ ಕೆಲವರ ಹೆಸರು ಮಾಯವಾದರೆ, ಮತ್ತೆ ಕೆಲವರ ಹೆಸರು ಸೇರ್ಪಡೆಯಾಗುವ ಮೂಲಕ ಗೊಂದಲಕ್ಕೆಎಡೆಮಾಡಿಕೊಡುತ್ತಿದೆ.
ಈಗಾಗಲೇ 70-80 ಮಂದಿಗೆ ಮೀರದಂತೆ ಪಟ್ಟಿ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದರೂ, ಪ್ರಶಸ್ತಿ ಆಕಾಂಕ್ಷಿಗಳ ಸಂಖ್ಯೆ ಮಿತಿಮೀರುತ್ತಿದೆ.
ಈ ನಡುವೆ ಪತ್ರಕರ್ತ ರವಿ ಬೆಳೆಗೆರೆ, ರಂಗಕರ್ಮಿ ನಾಗರಾಜ ಮೂರ್ತಿ, ಕಲಾವಿದೆ ಜಯಶ್ರೀ, ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಮಣ್ಯ ಸೇರಿದಂತೆ ಹಲವು ಹೆಸರುಗಳು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇದೇ ವೇಳೆ ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ. ಅಲ್ಲದೆ, ಪ್ರತಿ ವರ್ಷವೂ ವಿವಾದ ಹುಟ್ಟಿಸುವ ಈ ಪ್ರಶಸ್ತಿ ಈ ಬಾರಿ ಏನಾಗಲಿದೆ ಎಂದು ಕಾದು ನೋಡಬೇಕಿದೆ. |