ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕುಮಾರಸ್ವಾಮಿ ವಿರುದ್ಧ ಮುಂದಿನ ವಾರ ಕೇಸು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕುಮಾರಸ್ವಾಮಿ ವಿರುದ್ಧ ಮುಂದಿನ ವಾರ ಕೇಸು
ಮೇವರಿಕ್ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೇಲೆ 50 ಕೋಟಿ ರೂ. ಲಂಚದ ಆರೋಪ ಹೊರಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಮುಂದಿನ ವಾರ ಮಾನನಷ್ಟ ಮೊಕದ್ದಮೆ ಹೂಡಲು ಸರ್ಕಾರ ನಿರ್ಧರಿಸಿದೆ.

ಈ ಸಂಬಂಧ ಸರ್ಕಾರ ನೇಮಿಸಿರುವ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರವಿ ಬಿ. ನಾಯಕ್ ಅವರು ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ಅರ್ಜಿ ಸಿದ್ಧಪಡಿಸಿದ್ದು, ಮುಂದಿನ ವಾರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ.

ಈ ಕುರಿತು ಸರ್ಕಾರದಿಂದ ಅಧಿಕೃತ ಸೂಚನೆಗಾಗಿ ಎದುರು ನೋಡುತ್ತಿದ್ದು, ಇನ್ನೆರಡು ದಿನಗಳಲ್ಲಿ ಅಧಿಸೂಚನೆ ಕೈಸೇರಲಿದೆ ಎಂದು ಅವರು ತಿಳಿಸಿದ್ದಾರೆ.

ಮೇವರಿಕ್ ಸಂಸ್ಥೆಗೆ ಈಜೀಪುರದಲ್ಲಿ ಬಡವರಿಗೆ ಬಹುಮಹಡಿ ವಸತಿ ಸಮುಚ್ಛಯ ನಿರ್ಮಾಣದ ಗುತ್ತಿಗೆ ವಿವಾದಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸೆಪ್ಟೆಂಬರ್ 19ರಂದು ಸರ್ಕಾರ ನಿರ್ಧಾರ ಕೈಗೊಂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮತ್ತೆ ತಲೆನೋವು ತಂದ ರಾಜ್ಯೋತ್ಸವ ಪ್ರಶಸ್ತಿ !
ಕಾಂಗ್ರೆಸ್ ಸೋಲು ಪತ್ತೆಗೆ ಸಮಿತಿ: ಡಿಕೆಶಿ
ಮಹೇಂದ್ರ ಪ್ರಾಯೋಜಕತ್ವದಲ್ಲಿ ಕೈದಿಗಳ ಕಬಡ್ಡಿ !
ಬೆಳಗಾವಿ: ಉಗ್ರರಿಗಾಗಿ ತೀವ್ರ ಶೋಧ
ದೀಪಾವಳಿ: ಗಾಯಗೊಂಡವರ ಸಂಖ್ಯೆ ನೂರಕ್ಕೆ
ಕಾರ್ಕಳಕ್ಕೆ ನಕ್ಸಲ್ ತಂಡ ಭೇಟಿ