ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೆಳೆಗೆರೆ, ದಂಡಾವತಿ: ರಾಜ್ಯೋತ್ಸವ ಪಟ್ಟಿ ಪ್ರಕಟ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಳೆಗೆರೆ, ದಂಡಾವತಿ: ರಾಜ್ಯೋತ್ಸವ ಪಟ್ಟಿ ಪ್ರಕಟ
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗುರುವಾರ ಸಂಜೆ ಅಧಿಕೃತವಾಗಿ ಘೋಷಣೆಯಾಗಿದ್ದು, ಪತ್ರಕರ್ತರಾದ ರವಿ ಬೆಳಗೆರೆ, ಪದ್ಮರಾಜ್ ದಂಡಾವತಿ, ಇನ್ಫೋಸಿಸ್‌ನ ಮೋಹನ್ ದಾಸ್ ಪೈ ಸೇರಿದಂತೆ 90ಮಂದಿ ಗಣ್ಯರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇಂದು ಸಂಜೆ ಗೃಹಸಚಿವ ವಿ.ಎಸ್.ಆಚಾರ್ಯ ಅವರು ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆಗೊಳಿಸಿದರು. ಪ್ರಶಸ್ತಿಯನ್ನು ನ.1ರಂದು ವಿತರಿಸಲಿದ್ದು, ಪ್ರಶಸ್ತಿಯುವ 20ಗ್ರಾಂ ಚಿನ್ನ ಹಾಗೂ 1ಲಕ್ಷ ರೂಪಾಯಿ ನಗದನ್ನು ಒಳಗೊಂಡಿದೆ ಎಂದು ಅವರು ತಿಳಿಸಿದರು. ಈ ಮೊದಲು ಕೇವಲ 80ಮಂದಿ ಮಾತ್ರ ಪ್ರಶಸ್ತಿ ಪಟ್ಟಿಯಲ್ಲಿರುವುದಾಗಿ ತಿಳಿಸಲಾಗಿತ್ತು. ಪ್ರಶಸ್ತಿಗಾಗಿ ಒಟ್ಟು 3ಸಾವಿರಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದರು.

ಇದೀಗ ಪ್ರಶಸ್ತಿ ವಿಜೇತರ ಪಟ್ಟಿ 90ಗಡಿ ತಲುಪಿದ್ದು, ಡಾ.ವೀರಣ್ಣ ರಾಜೂರು, ಸಣ್ಣ ಕಥೆಗೆ ಡಾ.ಸಣ್ಣ ರಾಮ ನಾಯ್ಕ, ಮಾಹಿತಿ ತಂತ್ರಜ್ಞಾನದ ಅನಂತ ಕೊಪ್ಪಿಕರ್, ಸಂಗೀತ ಕ್ಷೇತ್ರದ ವೆಂಕಟ ರಾಘವನ್, ಡಾ.ವಿಜಯಾ ದಬ್ಬೆ, ಸ್ವಾತಂತ್ರ್ಯ ಹೋರಾಟಕ್ಕೆ ಹಮ್ಮಣ್ಣ ಮಾಣಿನಾಯಕ, ಯಶವಂತ ಹಳಬಂಡಿ, ಸುಳ್ಯದ ಡಾ.ಕುರುಂಜಿ ವೆಂಕಟರಮಣ ಗೌಡ ಸೇರಿದಂತೆ ಹಲವಾರು ಗಣ್ಯರು ಪ್ರಶಸ್ತಿ ಗಳಿಸಿದ್ದಾರೆ.

ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಾಗಿ ಪ್ರತಿವರ್ಷ ವಿವಾದ ಹುಟ್ಟಿಕೊಳ್ಳುತ್ತಿದ್ದು, ಈ ಬಾರಿಯೂ ಆಯ್ಕೆ ಪಟ್ಟಿಯಲ್ಲಿ ತಲೆನೋವು ತಂದಿತ್ತು. ಪ್ರಶಸ್ತಿ ಆಯ್ಕೆಯಲ್ಲಿ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ಪಟ್ಟಿ ಸಿದ್ದಪಡಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದರು.

ರಾಜ್ಯೋತ್ಸವ ಪ್ರಶಸ್ತಿ ವಿಜೇತರು:

ವಿಜ್ಞಾನ: ಡಾ: ಎಸ್.ಕೆ. ಶಿವಕುಮಾರ್ (ಇಸ್ರೋ), ಬೆಂಗಳೂರು, ಎಂ. ಅಣ್ಣಾದೊರೈ (ಇಸ್ರೋ) ಬೆಂಗಳೂರು, ಪ್ರೊ. ಪಿ. ಬಲರಾಂ (ಐ.ಐಎಸ್ಸಿ) ವಿಜ್ಞಾನ, ಬೆಂಗಳೂರು

ಸಾಹಿತ್ಯ: ಡಾ: ವಿಜಯಾ ದಬ್ಬೆ, ಹಾಸನ, ಪ್ರೊ, ಎಸ್.ಜಿ. ಸಿದ್ದರಾಮಯ್ಯ, ತುಮಕೂರು, ಡಾ: ವೀರಣ್ಣ ರಾಜೂರ, ಧಾರವಾಡ, ಎಸ್.ಆರ್. ರಾಮಸ್ವಾಮಿ, ಬೆಂಗಳೂರು, ಫರೀದಾ ರಹಮತುಲ್ಲಾ (ಉರ್ದು), ಡಾ: ಸಣ್ಣ ರಾಮನಾಯ್ಕ, ಶಿವಮೊಗ್ಗ , ಅಂಬಾತನಯ ಮುದ್ರಾಡಿ, ಉಡುಪಿ,

ಕೃಷಿ: ಮೀರಾತಾಯಿ ಕೊಪ್ಪಿಕರ್(ಸಾವಯವ ಕೃಷಿ) ಧಾರವಾಡ, ಪಾಪಮ್ಮ ಪಾಪಣ್ಣ, ಕುರುಬರಹಳ್ಳಿ(ಸಾವಯವ ಕೃಷಿ) ಕೋಲಾರ, ಡಾ: ಜಿ.ಪಿ. ಶೆಟ್ಟಿ (ಕೃಷಿ ವಿಜ್ಞಾನಿ) ಉಡುಪಿ

ಸ್ವಾತಂತ್ರ್ಯ ಹೋರಾಟಗಾರರು: ಹಮ್ಮಣ್ಣ ಮಾಣಿ ನಾಯಕ, ಉತ್ತರ ಕನ್ನಡ

ಮಾಹಿತಿ ತಂತ್ರಜ್ಞಾನ: ಮೋಹನದಾಸ್ ಪೈ, ದಕ್ಷಿಣ ಕನ್ನಡ ಅನಂತ ಕೊಪ್ಪರ, ಗದಗ

ಶಾಸ್ತ್ರೀಯ ಸಂಗೀತ: ವೆಂಕಟರಾಘವನ್ (ಕರ್ನಾಟಕ ಶಾಸ್ತ್ರೀಯ ಸಂಗೀತ) ಮೈಸೂರು, ಸಂಗಮೇಶ್ವರಸ್ವಾಮಿ ಹಿರೇಮಠ (ಹಿ.ಶಾ.ಸಂಗೀತ) ಬಾಗಲಕೋಟೆ
ಹನುಮಂತಕುಮಾರ್ ಮುಧೋಳ್ (ಕೊಳಲು) ಕೊಪ್ಪಳ, ಶಿವಪ್ಪ ಯಲ್ಲಪ್ಪ ಭಜಂತ್ರಿ (ಶಹನಾಯಿ) ಹಾವೇರಿ, ಬಿ. ಶಂಕರರಾವ್(ಕೊಳಲು) ಬೆಂಗಳೂರು

ಸುಗಮ ಸಂಗೀತ: ಟಿ.ವಿ. ರಾಜು, ತುಮಕೂರು, ಯಶವಂತ ಹಳಬಂಡಿ, ಧಾರವಾಡ, ಶಾಂತಾ ಆನಂದ, ಶಿವಮೊಗ್ಗ

ಗಮಕ: ಕೆ.ಎಲ್. ನಾರಾಯಣಸ್ವಾಮಿ(ಗಮಕಿ) ಹಾಸನ

ರಂಗಭೂಮಿ: ವಿ. ರಾಮಮೂರ್ತಿ, ಬೆಂಗಳೂರು ವಾಣಿ ಸರಸ್ವರಿ ನಾಯ್ಡು, ಹುಬ್ಬಳ್ಳಿ, ಬಿ.ಎಂ. ಕೃಷ್ಣೇಗೌಡ, ಚಿಕ್ಕಬಳ್ಳಾಪುರ, ಶ್ರೀಮತಿ ಮಾಲತಿ ಸುಧೀರ್, ಬೆಂಗಳೂರು, ಭೈರೇಗೌಡ ಮರಿಸಿದ್ದಯ್ಯ, ರಾಮನಗರ

ನೃತ್ಯ: ಶ್ರೀಮತಿ ಗೀತಾ ಬಾಲಿ, ಬೆಂಗಳೂರು

ಜಾನಪದ: ಡಾ: ಅಂಬಳಿಕೆ ಹಿರಿಯಣ್ಣ, ಶಿವಮೊಗ್ಗ, ಈರಬಡಪ್ಪ, ಚಿತ್ರದುರ್ಗ, ಶಿವಲಿಂಗಪ್ಪ ಹಗಲು ವೇಷಗಾರ, ರಾಯಚೂರು, ಶ್ರೀಮತಿ ಚೌಡಿಕೆ ಉಚ್ಚಂಗೆಮ್ಮ, ದಾವಣಗೆರೆ, ಭೋವಿ ಜಯಮ್ಮ, ಚಿತ್ರದುರ್ಗ, ಲಿಂಗದೇವರು ಮಹದೇವಪ್ಪ, ಮಂಡ್ಯ.

ಯಕ್ಷಗಾನ: ಕೆ. ಗೋವಿಂದಭಟ್, ದಕ್ಷಿಣ ಕನ್ನಡ, ಶ್ರೀಮತಿ ಸಣ್ಣಕ್ಕಿ ಬಂಗ್ಲೆಗುಡ್ಡೆ (ಪಾಡ್ಡನಗಾಯಕಿ) ದಕ್ಷಿಣ ಕನ್ನಡ ಪಾತಾಳ ವೆಂಕಟರಮಣಭಟ್, ದಕ್ಷಿಣ ಕನ್ನಡ, ಅರಳಕುಪ್ಪೆ ನಂಜಪ್ಪ (ತುಮಕೂರು)

ಚಿತ್ರಕಲೆ: ಪ್ರೊ.ವಿ.ಎಂ. ಸೊಲಾಪುರ್ಕರ್, ಬಿಜಾಪುರ, ಚಂದ್ರನಾಥ ಆಚಾರ್, ಬೆಂಗಳೂರು , ಯಶವಂತ ಹಿಬಾರೆ, ಬೀದರ, ಬಿ.ಜಿ. ಮಹಮದ್, ದಕ್ಷಿಣ ಕನ್ನಡ,

ಶಿಲ್ಪಕಲೆ: ಜಯಣ್ಣಾಚಾರ್, ಚಿಕ್ಕಮಗಳೂರು, ಕೆ. ನಾರಾಯಣರಾವ್, ಶಿವಮೊಗ್ಗ, ಗುಣವಂತೇಶ್ವರ ಭಟ್, ಉಡುಪಿ

ಚಲನಚಿತ್ರ: ಶ್ರೀ ಎಸ್.ಕೆ. ಭಗವಾನ್(ದೊರೆ ಭಗವಾನ್)ಬೆಂಗಳೂರು, ಎಸ್.ಪಿ. ಬಾಲಸುಬ್ರಮಣ್ಯಂ(ಗಾಯಕರು)ಚೆನ್ನೈ ಸಾಯಿಕುಮಾರ್(ನಟ ನಿರ್ದೇಶಕ)ಬೆಂಗಳೂರು ಬಸಂತಕುಮಾರ್ ಪಾಟೀಲ್, (ನಿರ್ದೇಶಕ, ನಿರ್ಮಾಪಕ, ನಾಯಕ) ಬಿಜಾಪುರ, ಪ್ರಮೀಳಾ ಜೋಷಾಯ್ (ನಟಿ) ಬೆಂಗಳೂರು ಶ್ರೀನಿವಾಸ ಕಡವಿಗೆರೆ(ಕಿರುತೆರೆ)ತುಮಕೂರು

ವೈದ್ಯಕೀಯ: ಡಾ: ಹೆಚ್.ವಿ. ಕೊಟ್ರೇಶ್, ಶಿವಮೊಗ್ಗ, ಡಾ: ಡಿ.ನಾಗರಾಜ್(ನಿಮಾನ್ಸ್ ನಿರ್ದೇಶಕರು)ಬೆಂಗಳೂರು, ಡಾ: ಸುಬ್ರಾಯಪ್ಪ, ಬೆಂಗಳೂರು, ಡಾ: ವೆಂಕಟರಮಣ ನೀಲಂ, ಬೆಂಗಳೂರು, ಡಾ: ಬಿ.ಕೆ. ಶ್ರೀನಿವಾಸಮೂರ್ತಿ, ಬಳ್ಳಾರಿ.

ಪತ್ರಿಕೋದ್ಯಮ: ಪದ್ಮರಾಜ್ ದಂಡಾವತಿ, ಬಿಜಾಪುರ, ಶ್ರೀ ಕಷ್ಣಮೂರ್ತಿ ಹೆಗಡೆ, ಧಾರವಾಡ, ರವಿಬೆಳಗೆರೆ, ಬಳ್ಳಾರಿ, ಕೆ.ಬಿ. ಗಣಪತಿ, ಕೊಡಗು, ಬೇಸುನಾ ಮಲ್ಯ, ಬೆಂಗಳೂರು, ಚಂದ್ರಕಾಂತ್ , ಶಿವಮೊಗ್ಗ, ಶ್ರೀ ಮದನ್ ಮೋಹನ್, ಧಾರವಾಡ, ಇಮ್ರಾನ್ ಖುರೇಷಿ, ಬೆಂಗಳೂರು.

ಶಿಕ್ಷಣ: ಪ್ರೊ. ಕೆ.ಎಸ್. ನಾರಾಯಣಾಚಾರ್ಯ, ಧಾರವಾಡ, ಪ್ರೊ.ವಿ.ಬಿ. ಕುಟಿನೋ, ಉತ್ತರ ಕನ್ನಡ, ಶ್ರೀ ಬಸವರಾಜಪಾಟೀಲ್, ಸೇಡಂ, ಗುಲಬರ್ಗಾ, ಡಾ: ಕುರಂಜಿ ವೆಂಕಟರಮಣಗೌಡ, ದಕ್ಷಿಣ ಕನ್ನಡ

ಕರಕುಶಲ ಕಲೆ: ಶ್ರೀ ಪುಟ್ಟರಾಜು, ಚಾಮರಾಜನಗರ, ಶ್ರೀ ನಾರಾಯಣಪ್ಪ (ನೇಕಾರ) ಬೆಂಗಳೂರು

ಕ್ರೀಡೆ: ಜೆ.ಜೆ. ಶೋಭಾ (ಹೆಪ್ಟತ್ಲಾನ್) ಧಾರವಾಡ, (ಅರ್ಜುನ ಪ್ರಶಸ್ತಿ ವಿಜೇತರು) ಕುಮಾರಿ ಶಿಖಾ ಟಂಡನ್ (ಈಜು) (ಅರ್ಜುನ ಪ್ರಶಸ್ತಿ ವಿಜೇತರು) ಬೆಂಗಳೂರು

ಸಮಾಜಸೇವೆ/ಸಂಕೀರ್ಣ: ಎನ್.ಆರ್. ನಾರಾಯಣರಾವ್( ಹೋಟೆಲ್ ಉದ್ಯಮ) ಉಡುಪಿ, ಶ್ರೀ ಎಸ್.ಎಸ್. ಪಾಟೀಲ್, (ಸಮಾಜ ಸೇವೆ/ಉದ್ಯಮ) ಗುಲಬರ್ಗಾ, ಶ್ರೀ ಪಿ. ವಲಿ, ಬಳ್ಳಾರಿ, ಎಸ್.ಸಿ. ಬರ್ಮನ್(ಆಡಳಿತ) ಬೆಂಗಳೂರು, ಕೇವಲಚಂದ್, ಬೆಂಗಳೂರು, ಸಿದ್ದನಗೌಡ ಪಾಟೀಲ(ಕನ್ನಡ ಹೋರಾಟಗಾರರು) ಬೆಳಗಾವಿ, ನಿತಿನ್ ಷಾ (ಪುಸ್ತಕ ಪ್ರಕಾಶನ) ಬೆಂಗಳೂರು

ಹೊರನಾಡು/ಹೊರದೇಶ ಕನ್ನಡಿಗ: ಡಾ: ಉದಯ ಬಿ.ಎಸ್. ಪ್ರಕಾಶ್, ವೈದ್ಯಕೀಯ ವಿಜ್ಞಾನ, ಅಮೇರಿಕಾ, ಡಾ: ಮೀರಜ್ ಪಾಟೀಲ್(ವೈದ್ಯ),(ಇಂಗ್ಲೆಂಡ್) ಡಾ: ಎಂ.ಬಿ. ಉದೋಶಿ (ಸಮಾಜ ಸೇವೆ/ವೈದ್ಯಕೀಯ)ಅಮೇರಿಕಾ, ವಿಜಯ್ ಕುಮಾರ್ ಶೆಟ್ಟಿ, ಸಮಾಜ ಸೇವೆ,ಮುಂಬೈ, ಉಪೇಂದ್ರ ಭಟ್, ಹಿಂದೂಸ್ಥಾನಿ ಸಂಗೀತ, ಪುಣೆ, ಡಾ: ಉಮಾ ಮೈಸೂರ್ಕರ್ (ವೈದ್ಯ) ಅಮೇರಿಕ

ಆಯುರ್ವೇದ: ಡಾ: ಟಿ.ಎಲ್ ದೇವರಾಜ್, ಬೆಂಗಳೂರು,

ಪಶುವೈದ್ಯ: ಡಾ: ಜಯದೇವಪ್ಪ,(ಮಾಯಕೊಂಡ) ದಾವಣಗೆರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನ.1 ರಂದು ಖಾಸಗಿ ಕಂಪೆನಿಗಳಿಗೆ ರಜೆ ಕಡ್ಡಾಯ
ಸ್ಫೋಟ: ರಾಜ್ಯಾದ್ಯಂತ ಕಟ್ಟೆಚ್ಚರ
ಬೆಳ್ಳುಬ್ಬಿಗೆ ವಿದ್ಯುತ್ ಕಾರ್ಖಾನೆ ಅಧ್ಯಕ್ಷಗಾದಿ
ಚುನಾವಣೆ: ಕಾಂಗ್ರೆಸ್–ಬಿಜೆಪಿಗೆ ಪ್ರತಿಷ್ಠೆಯ ಕಣ
ಶಂಕಿತ ಉಗ್ರ ನವೀದ್ ಸಿಲಿಂಡರ್ ಬಾಂಬ್ ತಜ್ಞ !
ಕುಮಾರಸ್ವಾಮಿ ವಿರುದ್ಧ ಮುಂದಿನ ವಾರ ಕೇಸು