ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನ.3 ರಿಂದ ಹಂಪಿ ಉತ್ಸವಕ್ಕೆ ಚಾಲನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ.3 ರಿಂದ ಹಂಪಿ ಉತ್ಸವಕ್ಕೆ ಚಾಲನೆ
ವಿಜಯನಗರದ ಗತ ವೈಭವವನ್ನು ನೆನಪಿಸುವ ಹಂಪಿ ಉತ್ಸವ ನವೆಂಬರ್ 3 ರಿಂದ 5ರವರೆಗೆ ನಡೆಯಲಿದ್ದು, ವಿಜೃಂಭಣೆಯಿಂದ ಆಚರಿಸಲು ಸರ್ಕಾರ ನಿರ್ಧರಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರವಾಸೋದ್ಯಮ ಮತ್ತು ಮೂಲಭೂತ ಸೌಕರ್ಯ ಸಚಿವ ಡಿ. ಜನಾರ್ದನ ರೆಡ್ಡಿ, ಮೂರು ದಿನಗಳ ಕಾಲ ನಡೆಯುವ ಈ ಉತ್ಸವಕ್ಕೆ 3 ಕೋಟಿ ವೆಚ್ಚದಲ್ಲಿ ಆಚರಿಸಲಾಗುವುದು ಎಂದು ತಿಳಿಸಿದ್ದಾರೆ.

ಹಂಪಿ ಉತ್ಸವದಲ್ಲಿ ವಸ್ತು ಪ್ರದರ್ಶನ, ಪುಸ್ತಕ ಮಳಿಗೆ, ಅಲೆಮಾರಿ ಕಲಾವಿದರ ಕಲಾ ಪ್ರದರ್ಶನ, ಕುಸ್ತಿ ಪಂದ್ಯಾವಳಿ, ಮಲ್ಲಕಂಬ ಪ್ರದರ್ಶನ ಆಯೋಜಿಸಲಾಗಿದ್ದು, ಪ್ರತಿನಿತ್ಯ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರ ಉತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಅಲ್ಲದೆ, ಪ್ರವಾಸಿಗರ ವಸತಿ, ಮೂಲಸೌಲಭ್ಯಕ್ಕಾಗಿ 1500 ತಾತ್ಕಾಲಿಕ ಟೆಂಟ್ ಗಳನ್ನು ನಿರ್ಮಿಸಲಾಗಿದ್ದು, ಬಾದಾಮಿ, ಪಟ್ಟದಕಲ್ಲು, ಐಹೊಳೆಗಳಿಗೆ ಪ್ರವಾಸೋದ್ಯಮ ಇಲಾಖೆ ಪ್ಯಾಕೆಜ್ ಪ್ರವಾಸವನ್ನು ಆಯೋಜಿಸಿದೆ ಎಂದು ಅವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೆಳೆಗೆರೆ, ದಂಡಾವತಿ: ರಾಜ್ಯೋತ್ಸವ ಪಟ್ಟಿ ಪ್ರಕಟ
ನ.1 ರಂದು ಖಾಸಗಿ ಕಂಪೆನಿಗಳಿಗೆ ರಜೆ ಕಡ್ಡಾಯ
ಸ್ಫೋಟ: ರಾಜ್ಯಾದ್ಯಂತ ಕಟ್ಟೆಚ್ಚರ
ಬೆಳ್ಳುಬ್ಬಿಗೆ ವಿದ್ಯುತ್ ಕಾರ್ಖಾನೆ ಅಧ್ಯಕ್ಷಗಾದಿ
ಚುನಾವಣೆ: ಕಾಂಗ್ರೆಸ್–ಬಿಜೆಪಿಗೆ ಪ್ರತಿಷ್ಠೆಯ ಕಣ
ಶಂಕಿತ ಉಗ್ರ ನವೀದ್ ಸಿಲಿಂಡರ್ ಬಾಂಬ್ ತಜ್ಞ !