ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸುಳ್ಳು ಮಾಹಿತಿ: ಅಧಿಕಾರಿಗಳ ವಿರುದ್ಧ ದೂರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸುಳ್ಳು ಮಾಹಿತಿ: ಅಧಿಕಾರಿಗಳ ವಿರುದ್ಧ ದೂರು
ಶಾಸಕ ಸೊಗಡು ಶಿವಣ್ಣ ಅವರು ಚುನಾವಣಾ ಆಯೋಗಕ್ಕೆ ಸುಳ್ಳು ಆಸ್ತಿ ಮಾಹಿತಿ ನೀಡಿರುವ ಕುರಿತು ಕ್ರಮ ಕೈಗೊಳ್ಳಲು ವಿಫಲರಾಗಿರುವ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗುವುದು ಎಂದು ತುಮಕೂರಿನ ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ವಿರೋಧ ಪ್ರತಿಷ್ಠಾನದ ಮುಖ್ಯಸ್ಥ ಶ್ರೀಧರ್ ಬಾಬು ತಿಳಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಶಿವಣ್ಣ ಅವರು ಸರಿಯಾದ ಆಸ್ತಿ ವಿವರ ನೀಡಿರಲಿಲ್ಲ. ಈ ಬಗ್ಗೆ ಚುನಾವಣಾ ಆಯೋಗ ನೋಟಿಸ್ ನೀಡಿದ್ದರೂ ಶಿವಣ್ಣ ಅವರಿಂದ ಉತ್ತರ ಬಂದಿಲ್ಲ. ಈಗ ಚುನಾವಣಾ ಪ್ರಕ್ರಿಯೆ ಮುಗಿದು ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಲಾಗುತ್ತಿದೆ.

ಈ ಕುರಿತು ಎಲ್ಲ ದಾಖಲಾತಿಗಳನ್ನು ಸಲ್ಲಿಸಿದ್ದರೂ ಸಹ ಕ್ರಮ ಕೈಗೊಳ್ಳಲು ಅಧಿಕಾರಿಗಳು ವಿಫಲರಾಗಿದ್ದಾರೆ. ಚುನಾವಣಾ ಪ್ರಕ್ರಿಯೆ ಮುಗಿದ ನಂತರ ಪ್ರಕರಣವನ್ನು ಜಿಲ್ಲಾಧಿಕಾರಿಗಳಿಗೆ ವರ್ಗಾಯಿಸಲಾಗಿದ್ದರೂ ಪ್ರಕರಣ ವಿಲೇವಾರಿಯಾಗಿಲ್ಲ. ಇದರಿಂದ ಪ್ರತಿ ಹಂತದಲ್ಲೂ ಶಾಸಕರ ಪ್ರಭಾವ ಎದ್ದು ಕಾಣುತ್ತಿದೆ ಎಂದು ಶ್ರಿಧರ್ ಬಾಬು ಆರೋಪಿಸಿದ್ದಾರೆ.

ಸುಪ್ರೀಂಕೋರ್ಟ್ ಸಹ ಪ್ರಕರಣ ದಾಖಲಾದ 48 ಗಂಟೆಗಳಲ್ಲಿ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದೆ. ಆದರೆ, ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು, ಸಚಿವ ಆನಂದ ಅಸ್ನೋಟಿಕರ್ ಅವರ ಪ್ರಕರಣದಂತೆ ಈ ಪ್ರಕರಣವೂ ಮುಚ್ಚಿ ಹೋಗಬಹುದು. ಆದ್ದರಿಂದ ತಾವು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಿರುವುದಾಗಿ ಬಾಬು ತಿಳಿಸಿದ್ದಾರೆ.

ಶಿವಣ್ಣ ಸ್ಪಷ್ಟನೆ : ಈ ಕುರಿತು ಸ್ಪಷ್ಟನೆ ನೀಡಿರುವ ಶಾಸಕ ಶಿವಣ್ಣ, ಪಿತ್ರಾರ್ಜಿತವಾಗಿ ಬಂದ ಆಸ್ತಿ ಒಟ್ಟು ಅವಿಭಕ್ತ ಕುಟುಂಬದ ಸುಪರ್ದಿಯಲ್ಲಿತ್ತು. ಈಗ ಪಾಲು ಮಾಡಲಾಗಿದ್ದು, ನನ್ನ ಪಾಲು ನನ್ನ ಹೆಸರಿಗೆ ವರ್ಗಾವಣೆ ಆಗಿದೆ. ಆದ್ದರಿಂದ ಚುನಾವಣಾ ಪ್ರಕ್ರಿಯೆಯ ಸಂದರ್ಭದಲ್ಲಿ ತಾವು ಆಸ್ತಿಮಾಹಿತಿ ಸಲ್ಲಿಸುವಾಗ ಈ ಮಾಹಿತಿಯನ್ನು ನೀಡಿಲ್ಲ. ನಾನು ಯಾವುದೇ ಲೋಪ ಮಾಡಿಲ್ಲದಿರುವುದರಿಂದ ಹೆದರುವ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನ.2 ರಿಂದ ಹಂಪಿ ಉತ್ಸವಕ್ಕೆ ಚಾಲನೆ
ಬೆಳೆಗೆರೆ, ದಂಡಾವತಿ: ರಾಜ್ಯೋತ್ಸವ ಪಟ್ಟಿ ಪ್ರಕಟ
ನ.1 ರಂದು ಖಾಸಗಿ ಕಂಪೆನಿಗಳಿಗೆ ರಜೆ ಕಡ್ಡಾಯ
ಸ್ಫೋಟ: ರಾಜ್ಯಾದ್ಯಂತ ಕಟ್ಟೆಚ್ಚರ
ಬೆಳ್ಳುಬ್ಬಿಗೆ ವಿದ್ಯುತ್ ಕಾರ್ಖಾನೆ ಅಧ್ಯಕ್ಷಗಾದಿ
ಚುನಾವಣೆ: ಕಾಂಗ್ರೆಸ್–ಬಿಜೆಪಿಗೆ ಪ್ರತಿಷ್ಠೆಯ ಕಣ