ವಿಧಾನ ಪರಿಷತ್‌ನ ಮೂರು ಕ್ಷೇತ್ರಗಳ ಚುನಾವಣೆಯ ಮತದಾನ ಶುಕ್ರವಾರ ಸಂಜೆ ಮುಕ್ತಾಯಗೊಂಡಿದ್ದು, ಆರಂಭದಲ್ಲಿ ನೀರಸ ಮತದಾನವಾಗಿದ್ದರೂ ಅಂತಿಮವಾಗಿ ಶೇ.90ರಷ್ಟು ಮತದಾನವಾಗಿದೆ.
ಇಂದು ಬೆಳಿಗ್ಗೆ ಧಾರವಾಡ,ಬೆಳಗಾವಿ ಹಾಗೂ ಕೊಡಗಿನಲ್ಲಿ ಮತದಾನ ಆರಂಭಗೊಂಡಿದ್ದು, ಧಾರವಾಡದಲ್ಲಿ ಬೆಳಿಗ್ಗೆ 11ಗಂಟೆಯವರೆಗೆ ಕೇವಲ 5ಮಂದಿ ಮಾತ್ರ ಮತ ಚಲಾಯಿಸಿದ್ದರು. ಮುಕ್ತಾಯದ ವೇಳೆಗೆ ಬೆಳಗಾವಿಯಲ್ಲಿ ಶೇ.95, ಧಾರವಾಡದಲ್ಲಿ ಶೇ.99 ಹಾಗೂ ಮಡಿಕೇರಿಯಲ್ಲಿ ಶೇ.92ರಷ್ಟು ಮತದಾನವಾಗಿದೆ.
ಅದೇ ರೀತಿ ಗಡಿಭಾಗವಾದ ಬೆಳಗಾವಿಯಲ್ಲಿಯೂ ಮತದಾನ ಮಂದಗತಿಯಲ್ಲಿ ಸಾಗಿದ್ದು, ಏತನ್ಮಧ್ಯೆ ಎಂಇಎಸ್‌ನ ಸುಮಾರು 1091ಸದಸ್ಯರು ಮತದಾನ ಬಹಿಷ್ಕರಿಸಿದ್ದಾರೆ. ಕೊಡಗಿನಲ್ಲೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗುವ ಮೂಲಕ, ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದೆ.
ಕೊಡಗು ಜಿಲ್ಲೆಯಲ್ಲಿ ಅರುಣ್ ಮಾಚಯ್ಯ, ಬೆಳಗಾವಿಯ ಸತೀಶ್ ಜಾರಕಿಹೊಳಿ ಹಾಗೂ ಧಾರವಾಡದ ಬಸವರಾಜ್ ಬೊಮ್ಮಾಯಿ ಅವರ ರಾಜೀನಾಮೆಯಿಂದ ತೆರವಾದ ಮೂರು ವಿಧಾನಸಭಾ ಕ್ಷೇತ್ರಗಳ ಚುನಾವಣೆ ಇಂದು ನಡೆದಿದ್ದು, ನ.3ರಂದು ಮತಎಣಿಕೆ ನಡೆಯಲಿದೆ. |