ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮೈತ್ರಿ ಕುರಿತು ಮಾತನಾಡಿದರೆ ಎಚ್ಚರ: ದೇಶಪಾಂಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೈತ್ರಿ ಕುರಿತು ಮಾತನಾಡಿದರೆ ಎಚ್ಚರ: ದೇಶಪಾಂಡೆ
ಜೆಡಿಎಸ್-ಕಾಂಗ್ರೆಸ್ ಮೈತ್ರಿ ವಿಚಾರದಲ್ಲಿ ಇನ್ನು ಮುಂದೆ ಯಾವೊಬ್ಬ ಕಾಂಗ್ರೆಸ್ ಮುಖಂಡರು ಬಹಿರಂಗವಾಗಿ ಏನನ್ನೂ ಪ್ರಸ್ತಾಪಿಸಿಸಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಕುರಿತು ಪಕ್ಷದ ಅಧ್ಯಕ್ಷರು ಮಾತನಾಡುತ್ತಾರೆ. ಉಳಿದಂತೆ ಯಾರಿಗೂ ಇದರ ಹಕ್ಕಿಲ್ಲ ಎಂದು ತಿಳಿಸಿದ್ದಾರೆ.

ನಾಯಕರು ಮೊದಲು ಪಕ್ಷದ ಶಿಸ್ತು ಕಾಪಾಡುವತ್ತ ಗಮನ ಹರಿಸಬೇಕು. ಹೊಂದಾಣಿಕೆ ಕುರಿತಾದ ಏನೇ ವಿಷಯವಾಗಿರಲಿ ಅಂತಿಮವಾಗಿ ನಿರ್ಧಾರವಾಗುವುದು ಹೈಕಮಾಂಡ್ ವಲಯದಲ್ಲಿ ಎಂದು ಅವರು ಕಿವಿ ಮಾತು ಹೇಳಿದರು.

ಕಾಂಗ್ರೆಸ್‌‌ಗೆ ಕೈಕೊಟ್ಟಿರುವ ಜೆಡಿಎಸ್ ಜತೆ ಮೈತ್ರಿಗೆ ಮುಂದಾಗುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು, ಜೆಡಿಎಸ್ ತಪ್ಪು ಮಾಡಿದ್ದರಿಂದಲೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತಾಯಿತು. ಈಗ ಜೆಡಿಎಸ್ ನಾಯಕರಿಗೆ ತಪ್ಪಿನ ಅರಿವಾಗಿರಬೇಕೆಂದು ಭಾವಿಸುತ್ತೇನೆ ಎಂದು ತಿಳಿಸಿದರು.

ಇದೇ ವೇಳೆ ಶಾಸ್ತ್ರೀಯ ಸ್ಥಾನಾನದ ಕುರಿತು ಮಾತನಾಡಿದ ಅವರು, ಈ ಬೆಳವಣಿಗೆಯಿಂದ ರಾಜ್ಯದ ಐದು ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡದ ಪ್ರತ್ಯೇಕ ಪೀಠ ಸ್ಥಾಪನೆ ಮಾಡಿ ಅಧ್ಯಯನ ಮಾಡಲು ಅನುಕೂಲವಾಗಲಿದೆ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕನ್ನಡದ ಅಭಿವೃದ್ಧಿಗೆ 25 ಕೋಟಿ: ಯಡಿಯೂರಪ್ಪ
ಕನ್ನಡ ನಾಮಫಲಕ- 60 ದಿನ ಗಡುವು: ಚಂದ್ರು
ಕನ್ನಡ ಚರಿತ್ರೆಯಲ್ಲಿ ಐತಿಹಾಸಿಕ ದಿನ: ಸಿಎಂ
ಹಿಂದಿ ಹಾಡು ಪ್ರಸಾರ: ಎಫ್‌ಎಂ ಕೇಂದ್ರಕ್ಕೆ ಕರವೇ ದಾಳಿ
ರಾಜ್ಯೋತ್ಸವ ಪ್ರಶಸ್ತಿ ಇಂದು ಪ್ರದಾನ
ನಾಡಿನಾದ್ಯಂತ ರಾಜ್ಯೋತ್ಸವ ಸಂಭ್ರಮ