ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರಾಂಚಿ:ರಾಜ್ ಠಾಕ್ರೆ ವಿರುದ್ಧ ಕೊಲೆ ಮೊಕದ್ದಮೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಂಚಿ:ರಾಜ್ ಠಾಕ್ರೆ ವಿರುದ್ಧ ಕೊಲೆ ಮೊಕದ್ದಮೆ
ಕಳೆದ ತಿಂಗಳು ರೈಲ್ವೆ ಪ್ರಯಾಣಿಕನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ‌ಎಸ್ಎನ್‌ನ ವರಿಷ್ಠ ರಾಜ್ ಠಾಕ್ರೆ ಮತ್ತು 15ಮಂದಿ ಕಾರ್ಯಕರ್ತರ ವಿರುದ್ಧ ಜಾರ್ಖಂಡ್ ನ್ಯಾಯಾಲಯದಲ್ಲಿ ಶನಿವಾರ ಕೊಲೆ ಮೊಕದ್ದಮೆ ದಾಖಲಿಸಲಾಗಿದೆ.

ರಾಂಚಿಯಿಂದ 240ಕಿ.ಮೀ.ದೂರದಲ್ಲಿರುವ ಚಾಕಿಟ್ಟಾ ಗ್ರಾಮದ ನಿವಾಸಿಯಾದ ರಾಜು ಮಲ್ಲಿಕ್ ಎಂಬವರು ಇಲ್ಲಿನ ಧನ್‌ಬಾದ್ ನ್ಯಾಯಾಲಯದಲ್ಲಿ ಕೊಲೆ ಮೊಕದ್ದಮೆ ಪ್ರಕರಣ ದಾಖಲಿಸಿದರು.

ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆ(ಐಪಿಸಿ)ವಿವಿಧ ಕಲಂನ ಅನ್ವಯ ದೂರನ್ನು ದಾಖಲಿಸಿರುವುದಾಗಿ ಅವರು ತಿಳಿಸಿದ್ದಾರೆ.

ಕೆಲಸದ ಹುಡುಕಾಟಕ್ಕಾಗಿ ಧನ್‌ಬಾದ್‌ನಿಂದ ಮಲ್ಲಿಕ್ ಹಾಗೂ ಸಾಕ್ಲಾದೆವೋ, ವಿಜಯ್ ಸಿಂಗ್ ರೈಲಿನಲ್ಲಿ ಮುಂಬೈಗೆ ತೆರಳುತ್ತಿದ್ದಾಗ ಅಕ್ಟೋಬರ್ 19ರಂದು ಎಂಎನ್ಎಸ್ ಕಾರ್ಯಕರ್ತರು ಏಕಾಏಕಿ ದಾಳಿ ನಡೆಸಿ ಹಲ್ಲೆ ನಡೆಸಿದ ಪರಿಣಾಮ, ಆ ಸಂದರ್ಭದಲ್ಲಿ ನಾವಿಬ್ಬರು ತಪ್ಪಿಸಿಕೊಂಡಿದ್ದು, ಸಾಕ್ಲಾದೆವೋ ಬಲಿಯಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹೈ-ಕ ಅಭಿವೃದ್ಧಿಗೆ ಒತ್ತು: ಯಡಿಯೂರಪ್ಪ
ಆರೋಗ್ಯ ಕವಚ: ಅಬ್ದುಲ್ ಕಲಾಂ ಉದ್ಘಾಟನೆ
ಮೈತ್ರಿ ಕುರಿತು ಮಾತನಾಡಿದರೆ ಎಚ್ಚರ: ದೇಶಪಾಂಡೆ
ಕನ್ನಡದ ಅಭಿವೃದ್ಧಿಗೆ 25 ಕೋಟಿ: ಯಡಿಯೂರಪ್ಪ
ಕನ್ನಡ ನಾಮಫಲಕ- 60 ದಿನ ಗಡುವು: ಚಂದ್ರು
ಕನ್ನಡ ಚರಿತ್ರೆಯಲ್ಲಿ ಐತಿಹಾಸಿಕ ದಿನ: ಸಿಎಂ