ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕನ್ನಡೇತರ ಹೆಸರುಗಳಿರುವ ಚಿತ್ರಗಳಿಗೆ ಎಳ್ಳುನೀರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕನ್ನಡೇತರ ಹೆಸರುಗಳಿರುವ ಚಿತ್ರಗಳಿಗೆ ಎಳ್ಳುನೀರು
ಕನ್ನಡಕ್ಕೆ ಶಾಸ್ತ್ತ್ರೀಯ ಸ್ಥಾನಮಾನ ಸಿಗುತ್ತಿದ್ದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೂ ಎಚ್ಚೆತ್ತುಕೊಂಡಿದೆ. ಇಂಗ್ಲೀಷ್ ಅಥವಾ ಅಶ್ಲೀಲ ಹೆಸರುಗಳಿರುವ ಕನ್ನಡ ಚಿತ್ರಗಳನ್ನು ನಿಷೇಧಿಸಲು ನಿರ್ಧರಿಸಿದೆ. ಕನ್ನಡ ಹೆಸರುಗಳಿರುವ ಚಿತ್ರಗಳಷ್ಟೇ ಮಂಡಳಿಯಲ್ಲಿ ನೋಂದಾವಣೆಯಾಗಬೇಕು.

ಮೂರು ವರ್ಷಗಳ ಹಿಂದೆಯೇ ತೆಗೆದುಕೊಂಡು ಈ ನಿರ್ಧಾರವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಮಂಡಳಿಯ ಅಧ್ಯಕ್ಷೆ ಜಯಮಾಲಾ ತಿಳಿಸಿದ್ದಾರೆ. ಕನ್ನಡೇತರ ಹೆಸರುಗಳಿರುವ ಕನ್ನಡ ಚಿತ್ರಗಳನ್ನು ನಿಷೇಧಿಸಬೇಕೆಂದು ಅನೇಕ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳು ಸಲಹೆ ನೀಡಿವೆ. ಕನ್ನಡ ಭಾಷೆ ಹಾಗೂ ಸಂಸ್ಕ್ಕತಿಯನ್ನು ಬೆಳೆಸುವ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದರು.

ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಕನ್ನಡ ಚಿತ್ರರಂಗ ಅನ್ಯ ಭಾಷಾ ಚಿತ್ರಗಳ ಹಾವಳಿಯಲ್ಲಿ ಕಳೆದು ಹೋಗುತ್ತಿದೆ. ನಾವು ಇಂಗ್ಲೀಷ್ ಹೆಸರುಗಳನ್ನು ಪ್ರೋತ್ಸಾಹಿಸಿದರೆ ಪರಭಾಷಾ ಚಿತ್ರಗಳ ನಡುವೆ ಕನ್ನಡ ಚಿತ್ರವನ್ನು ಹೇಗೆ ಗುರುತಿಸುವುದು ಎನ್ನುತ್ತಾರೆ ಜಯಮಾಲಾ.

ಆಗಸ್ಟ್‌ನಿಂದ ಮಂಡಳಿ ಅಶ್ಲೀಲ ಹಾಗೂ ಕನ್ನಡೇತರ ಹೆಸರುಗಳಿದ್ದ 30-35 ಚಿತ್ರಗಳನ್ನು ತಿರಸ್ಕರಿಸಿದೆ. ಕಪಿಲ್ ದೇವ್, ಫಾತಿಮಾ ವೆಡ್ಸ್ ಪೂಜಾರಿ, ಲವ್ ಮಂತ್ರ, ಡವ್ ರಾಜಾ, ರಾಮ ರಹೀಮಾ ರೋಸಿ, ಲಲ್ಲೇಶಾ, ಮೀಟರ್ ಇದ್ರೆ ಬಾ, ಶಾರ್ಟ್ ಟೆಂಪರ್ , ಫಟೋದ್ಗಜ ಇನ್ ಲವ್- ಇವ ತಿರಸ್ಕರಿಸಲ್ಪಟ್ಟ ಕೆಲವು ಚಿತ್ರಗಳು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಂಚಿ:ರಾಜ್ ಠಾಕ್ರೆ ವಿರುದ್ಧ ಕೊಲೆ ಮೊಕದ್ದಮೆ
ಹೈ-ಕ ಅಭಿವೃದ್ಧಿಗೆ ಒತ್ತು: ಯಡಿಯೂರಪ್ಪ
ಆರೋಗ್ಯ ಕವಚ: ಅಬ್ದುಲ್ ಕಲಾಂ ಉದ್ಘಾಟನೆ
ಮೈತ್ರಿ ಕುರಿತು ಮಾತನಾಡಿದರೆ ಎಚ್ಚರ: ದೇಶಪಾಂಡೆ
ಕನ್ನಡದ ಅಭಿವೃದ್ಧಿಗೆ 25 ಕೋಟಿ: ಯಡಿಯೂರಪ್ಪ
ಕನ್ನಡ ನಾಮಫಲಕ- 60 ದಿನ ಗಡುವು: ಚಂದ್ರು